ಮಡಿಕೇರಿ ಡಿ.2 : 2023-24 ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಟೆಕ್ವಾಂಡೋ ಪಂದ್ಯಾವಳಿಗೆ ಮಡಿಕೇರಿಯ ಸಂತ ಮೈಕಲರ ಪಿಯು ಕಾಲೇಜ್ ನ ಜೀವನ್ ಎಂ, ಕೃಷ್ಣಪಾಂಡಿ ಸಿ, ಮೋಹಿತ್ ಎಚ್.ಎಸ್, ಕ್ಯಾಲ್ವಿನ್ ಪಿ ಹಾಗೂ ಸಂತ ಜೋಸೆಫರ ಪಿಯು ಕಾಲೇಜ್ ನ ವೈಷ್ಣವಿ ಬಿ.ವಿ ಆಯ್ಕೆಯಾಗಿದ್ದಾರೆ.
ತುಮಕೂರಿನ ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಡಿ.4 ರಂದು ಪಂದ್ಯಾವಳಿ ನಡೆಯಲಿದ್ದು, ಕರ್ನಾಟಕ ರಾಜ್ಯ ಟೆಕ್ವಾಂಡೋ ತರಬೇತುದಾರ ಹಾಗೂ ಕೊಡಗು ಜಿಲ್ಲಾ ವ್ಯವಸ್ಥಾಪಕ, ಮರ್ಕರ ಟೆಕ್ವಾಂಡೋ ಕ್ಲಬ್ ನ ಮಾಸ್ಟರ್ ಕುಶಾಲ್ ಕುಮಾರ್ ವಿದ್ಯಾರ್ಥಿಗಳೊಂದಿಗೆ ತೆರಳಲಿದ್ದಾರೆ.
ಎರಡೂ ಕಾಲೇಜ್ ನ ಪ್ರಾಂಶುಪಾಲರ ಪ್ರೋತ್ಸಾಹ ಹಾಗೂ ಸಂತ ಮೈಕಲರ ಕಾಲೇಜ್ ನ ದೈಹಿಕ ಶಿಕ್ಷಕಿ ಜಾನಕಿ ಐ. ಅವರ ಸಹಕಾರದೊಂದಿಗೆ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತರಬೇತುದಾರ ಕುಶಾಲ್ ಕುಮಾರ್ ತಿಳಿಸಿದ್ದಾರೆ.










