ಮಡಿಕೇರಿ. ಡಿ.3 : ಜನರು ಮತ್ತು ನ್ಯಾಯಾಲಯಗಳ ಮಧ್ಯೆ ಸೌಹಾಧ೯ದ ಸೇತುವೆಗಳಂತೆ ಕಾಯ೯ನಿವ೯ಹಿಸುವ ಮಹತ್ವದ ಹೊಣೆಗಾರಿಕೆ ಹೊಂದಿರುವ ವಕೀಲರು ಸಮಾಜದಲ್ಲಿ ಗುರುತರ ಬದಲಾವಣೆ ತರುವಲ್ಲಿಯೂ ಪ್ರಮುಖ ಪಾತ್ರ ವಹಿಸಬೇಕೆಂದು ರಾಜ್ಯ ಸಕಾ೯ರದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಕರೆ ನೀಡಿದ್ದಾರೆ.
ನಗರದ ಹೊರವಲಯದಲ್ಲಿನ ಕ್ಯಾಪಿಟಲ್ ವಿಲೇಜ್ ರೆಸಾಟ್೯ನಲ್ಲಿ ಮಡಿಕೇರಿ ವಕೀಲರ ಸಂಘದ ವತಿಯಿಂದ ಆಯೋಜಿತವಾದ ವಕೀಲರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಇತರ ವೖತ್ತಿಗಳಿಗೆ ಹೋಲಿಸಿದರೆ ವಕೀಲ ವೖತ್ತಿಯು ಅತ್ಯಂತ ಘನತೆ, ಗೌರವ ಹೊಂದಿರುವ ಮಹತ್ವದ ವೖತ್ತಿಯಾಗಿದೆ. ವಕೀಲ ವೖತ್ತಿಯಲ್ಲಿ ಇರುವವರು ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಿಂದಲೂ ಸಾಮಾಜಿಕ ವಿಚಾರಗಳಲ್ಲಿನ ಹೋರಾಟಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಈಗಲೂ ಕೂಡ ವಕೀಲರು ಸಾಮಾಜಿಕವಾಗಿ ಬದಲಾವಣೆ ತರುವಂಥ ಹೋರಾಟಗಳಲ್ಲಿ ಕಾನೂನಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಭಾರತದಲ್ಲಿ ಕಾನೂನು ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರಂಭವಾಗುತ್ತಿರುವುದು ಕೂಡ ವಕೀಲ ವೖತ್ತಿಯನ್ನು ಅತೀ ಹೆಚ್ಚು ಯುವಕ, ಯುವತಿಯರು ಆಯ್ಕೆ ಮಾಡಿಕೊಳ್ಳುತ್ತಿರುವುದಕ್ಕೆ ನಿದಶ೯ನದಂತಿದೆ ಎಂದು ಹೇಳಿದ ಶಶಿಕಿರಣ್ ಶೆಟ್ಟಿ, ವಕೀಲ ವೖತ್ತಿಯ ಪ್ರಾಮುಖ್ಯತೆ ಹೆಚ್ಚಳವಾಗುತ್ತಿರುವುದನ್ನು ಇದು ಸಾಬೀತು ಪಡಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಸೇನೆಯಲ್ಲಿ ಶಿಸ್ತಿನ ಸಿಪಾಯಿಗಳಾಗಿ ಖ್ಯಾತಿ ಗಳಿಸಿರುವ ಕೊಡಗಿನ ವಕೀಲ ವೖಂದ ಕೂಡ ಶಿಸ್ತಿಗೆ ಹೆಸರಾಗಿದ್ದಾರೆ ಎಂದು ಶ್ಲಾಘಿಸಿದ ಶಶಿಕಿರಣ್ ಶೆಟ್ಟಿ, ಯಾವುದೇ ವೖತ್ತಿಯಾಗಿರಲಿ ಮನಸ್ಸಿನಲ್ಲಿ ಸಂತೋಷದಿಂದ ಅಂಥ ವೖತ್ತಿಯನ್ನು ನಿವ೯ಹಿಸಬೇಕು. ಆಗ ಯಶಸ್ಸು ಖಂಡಿತಾ ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಚ್.ಎಲ್. ವಿಶಾಲ್ರಘು ಮಾತನಾಡಿ, ಮಡಿಕೇರಿ ವಕೀಲರ ಸಂಘದ ಕೋರಿಕೆ ಮೇರೆಗೆ ಮಡಿಕೇರಿಯಲ್ಲಿ 5 ದಿನಗಳ ಕಾಲ ವಕೀಲರಿಗಾಗಿ ವೖತ್ತಿ ಪರ ಕಾಯಾ೯ಗಾರ ಆಯೋಜಿಸಲು 1 ಲಕ್ಷ ರು. ಅನುದಾನವನ್ನು ವಕೀಲರ ಪರಿಷತ್ ನಿಂದ ನೀಡುವುದಾಗಿ ಹೇಳಿದರು. ಪ್ರಸ್ತುತ ಕನಾ೯ಟಕದಲ್ಲಿ 1.15 ಲಕ್ಷ ವಕೀಲರು ಕಾಯ೯ಪ್ರವೖತ್ತರಾಗಿದ್ದು, ಈ ಪೈಕಿ 27. 750 ಮಹಿಳಾ ವಕೀಲರಿದ್ದಾರೆ. ಪ್ರತೀ ವಷ೯ವೂ ರಾಜ್ಯದಲ್ಲಿ 7.500 ವಕೀಲರು ನೂತನವಾಗಿ ಸೇಪ೯ಡೆಯಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಹಾಲಿ ವಕೀಲರ ಪರಿಷತ್ ನಲ್ಲಿ 116 ಕೋಟಿ ರು. ಹಣ ಠೇವಣಿ ಇದೆ. ಮರಣವನ್ನಪ್ಪಿದ ವಕೀಲರ ಕುಟುಂಬಸ್ಥರಿಗೆ ಮತ್ತು ಅನಾರೋಗ್ಯಪೀಡಿತ ವಕೀಲರಿಗೆ ರಾಜ್ಯ ಪರಿಷತ್ ನಿಂದ ಸೂಕ್ತ ಆಥಿ೯ಕ ನೆರವು ನೀಡಲಾಗುತ್ತದೆ ಎಂದೂ ವಿಶಾಲ ರಘು ವಿವರಿಸಿದರು.
ಕೊಡಗು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಚ್.ಸಿ.ಶ್ಯಾಮ್ ಪ್ರಸಾದ್ ಮಾತನಾಡಿ, ಯಾವುದೇ ವಕೀಲರು ರಸ್ತೆಗಿಳಿದು ಕಕ್ಷಿದಾರರನ್ನು ಹುಡುಕುವಂಥ ಸ್ಥಿತಿ ನಿಮಾ೯ಣವಾಗಬಾರದು. ನ್ಯಾಯದ ಅಗತ್ಯತೆ ಉಳ್ಳವರು ಘನವೆತ್ತ ನ್ಯಾಯಾಲಯಗಳಿಗೆ ಬಂದು ವಕೀಲರ ನೆರವು ಪಡೆಯಬೇಕು. ವಕೀಲರು ಕಕ್ಷಿದಾರರೊಂದಿಗೆ ಪ್ರಾಮಾಣಿಕತೆಯಿಂದ ವ್ಯವಹರಿಸುವಂತೆ ಸಲಹೆ ನೀಡಿದರು. ವಕೀಲರು ತನ್ನ ವೖತ್ತಿಗೌರವ ಮತ್ತು ವೖತ್ತಿ ಧಮ೯ವನ್ನು ಪ್ರಾಮಾಣಿಕ ರೀತಿಯಲ್ಲಿ ಪಾಲಿಸುವಂತೆಯೂ ಶ್ಯಾಮ್ ಪ್ರಸಾದ್ ಕರೆ ನೀಡಿದರು. ಎಲ್ಲಾ ವಕೀಲರು ಸಂತೋಷದ ಜೀವನ ನಡೆಸುತ್ತಿಲ್ಲ. ಅನೇಕ ವಕೀಲರ ಜೀವನ ಸಂಕಷ್ಟದಿಂದಲೇ ಕೂಡಿದೆ. ಇಂಥವರಿಗೆ ವಕೀಲರ ಸಂಘಗಳು ನೆರವಿಗೆ ಮುಂದಾಗುವಂತೆಯೂ ಶ್ಯಾಮ್ ಪ್ರಸಾದ್ ಸೂಚಿಸಿದರು.
ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಮಾತನಾಡಿ, ಡಾ. ರಾಜೇಂದ್ರಪ್ರಸಾದ್ ಅವರ ಜನ್ಮದಿನದ ಪ್ರಯುಕ್ತ ಪ್ರತೀವಷ೯ ಡಿಸೆಂಬರ್ 3 ರಂದು ವಕೀವರ ದಿನವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ಅತ್ಯಂತ ಮಹತ್ವದ್ದಾದ ವಕೀಲರ ವೖತ್ತಿಗೆ ಕಾಲಿಡುತ್ತಿರುವ ಯುವವಕೀಲರಿಗೆ ಸ್ಪೂತಿ೯ದಾಯಕವಾಗಿ ಕೂಡ ವಕೀಲರ ದಿನದ ಆಚರಣೆ ಕಾರಣವಾಗುತ್ತದೆ ಎಂದು ಅನಿಸಿಕೆ ವ್ಕ್ತಪಡಿಸಿದರು.
ಹಿರಿಯ ವಕೀಲರಾದ ಮಡಿಕೇರಿಯ ಕೊಕ್ಕೆಂಗಡ ಸೌಭಾಗ್ಯ ಪೊನ್ನಪ್ಪ ಅವರನ್ನು ಈ ಸಂದಭ೯ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸೌಭಾಗ್ಯ ಪೊನ್ನಪ್ಪ, ಸದಾ ನಿಸ್ವಾಥಿ೯ಗಳಾಗಿ ವಕೀಲರು ಕಾಯ೯ನಿವ೯ಹಿಸಬೇಕು. ವಕೀಲರ ಮೇಲೆ ಕಕ್ಷಿದಾರರು ಮಾತ್ರವಲ್ಲದೇ ಸಮಾಜ ಕೂಡ ಸಾಕಷ್ಟು ನಿರೀಕ್ಷೆ ಹೊಂದಿರುತ್ತದೆ. ನಿರೀಕ್ಷೆಗಳು ಹುಸಿಯಾಗದಂತೆ ನಿಸ್ವಾಥ೯ದಿಂದ ವಕೀಲರು ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕಾಯ೯ಪ್ರವೖತ್ತರಾಗುವಂತೆ ಸಲಹೆ ನೀಡಿದರು.
ಕಾಯ೯ಕ್ರಮದಲ್ಲಿ ಕೊಡಗು ಜಿಲ್ಲಾ ಒಂದನೇ ಹೆಚ್ಚುವರಿ ನ್ಯಾಯಾಧೀಶರಾದ ಜಿ.ಪ್ರಶಾಂತಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಯಲಕ್ಷ್ಮಿ, ಹೆಚ್ಚುವರಿ ಕಿರಿಯ ಸಿವಿಲ್ ನ್ಯಾಯಾಧೀಶರಾದ ನಾಗೇಶ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾಯ೯ದಶಿ೯ ಕೆ.ಬಿ. ಪ್ರಸಾದ್, ಕೊಡಗು ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷೆ ರೇಣುಕಾಂಭ, ಆಯೋಗದ ಸದಸ್ಯೆ ಗೌರಮ್ಮಣ್ಣಿ, ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್, ಮಡಿಕೇರಿ ನಗರಸಭೆಯ ಅಧ್ಯಕ್ಷೆ ಅನಿತಾಪೂವಯ್ಯ, ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀಧರನ್ ನಾಯರ್, ಲೋಕಾಯುಕ್ತ ಪಬ್ಲಿಕ್ ಪ್ರಾಸಿಕ್ಯೂಟರ್ ಎಂ.ಎಂ.ಕಾಯ೯ಪ್ಪ, ಮಡಿಕೇರಿ ವಕೀಲರ ಸಂಘದ ಉಪಾಧ್ಯಕ್ಷ ಎಂ.ಪಿ. ನಾಗರಾಜ್, ಸಹಕಾಯದಶಿ೯ ಪವನ್ ಪೆಮ್ಮಯ್ಯ, ಕ್ರೀಡಾಸಮಿತಿ ಸಂಚಾಲಕ ಕಪಿಲ್ ಕುಮಾರ್, ವಕೀಲರ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ವಕೀಲರ ಸಂಘದ ಖಜಾಂಜಿ ಜಿ.ಆರ್.ರವಿಶಂಕರ್ ನಿರೂಪಿಸಿದ ಕಾಯ೯ಕ್ರಮದಲ್ಲಿ ಕೖಷ್ಣಮೂತಿ೯, ಪ್ರತಾಪ್, ನಳಿನಿ, ಕುಮುದಾ ಪ್ರಾಥಿ೯ಸಿ, ಸಂಘದ ಕಾಯ೯ದಶಿ೯ ಡಿ.ಎಂ.ಕೇಶವ ವಂದಿಸಿದರು. ಮಡಿಕೇರಿ ವಕೀಲರ ಸಂಘದ ಅನೇಕ ಹಿರಿಯ ಸದಸ್ಯರೂ ಸೇರಿದಂತೆ ನೂರಾರು ಸದಸ್ಯರು ಕುಟುಂಬ ವಗ೯ದೊಂದಿದೆ ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾಯ೯ಕ್ರಮಕ್ಕೂ ಮುನ್ನ ಅತಿಥಿಗಳು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಮನರಂಜನಾ ಕಾಯ೯ಕ್ರಮಗಳಿಗೆ ಚಾಲನೆ ನೀಡಿದರು. ವಿವಿಧ ಸ್ಪಧೆ೯ಗಳನ್ನು ವಕೀಲರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿತ್ತು.










