ಮಡಿಕೇರಿ ಡಿ.3 : ಮಡಿಕೇರಿಯಲ್ಲಿ ಆಯೋಜಿತವಾಗಿದ್ದ ಇನ್ನರ್ ವೀಲ್ ಜಿಲ್ಲಾ ಸಮ್ಮೇಳನದ ಅಂಗವಾಗಿ ಇನ್ನರ್ ವೀಲ್ ಸಂಸ್ಥೆಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾಯ೯ಕ್ರಮಗಳು ಆಕಷ೯ಕವಾಗಿ ನಡೆದವು. ನಗರದ ಕ್ರಿಸ್ಟಲ್ ಕೋಟ್೯ ಸಭಾಂಗಣದಲ್ಲಿ ಮಹಿಳೆಯರ ಸಾಂಸ್ಕೖತಿಕ ನೖತ್ಯಗಳ ವೈಭವ ಮೇಳೈಸಿತ್ತು.
ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಸದಸ್ಯೆಯರಿಂದ ಗಣಪತಿ ಸ್ತುತಿ ಗೀತ ನೖತ್ಯ, ಜೀವನದಿ ಕಾವೇರಿ ನೖತ್ಯ, ಕೊಡವ ನೖತ್ಯ, ಬುಡಕಟ್ಟು ನೖತ್ಯಗಳು ಗಮನ ಸೆಳೆದವು. ಕುಶಾಲನಗರ ಇನ್ನರ್ ವೀಲ್ ಸದಸ್ಯೆಯರಿಂದ ರೀಲ್ಸ್ ಡಾನ್ಸ್, ಸೋಮವಾರಪೇಟೆ ಇನ್ನರ್ ವೀಲ್ ಸದಸ್ಯೆಯರಿಂದ ಸುಗ್ಗಿ ಕುಣಿತ, ಮಲ್ಯೇಷಿಯ ತಂಡದಿಂದ ಮಲ್ಯೇಷಿಯನ್ ಜಿಗ್ ನೖತ್ಯ, ಮನ ಸೆಳೆದವು. ಇನ್ನರ್ ವೀಲ್ ಸಂಸ್ಥೆಯ ಮಾಜಿ ಜಿಲ್ಲಾ ಅಧ್ಯಕ್ಷರು ತಮ್ಮ ಆಡಳಿತ ವಷ೯ದ ಸಂದೇಶ ಸಾರುವ ಕಾಯ೯ಕ್ರಮ ಪ್ರಸ್ತುತ ಪಡಿಸಿದರು. ಅಂತೆಯೇ ಇನ್ನರ್ ವೀಲ್ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ವೈವಿಧ್ಯಮಯ ಸಾಂಪ್ರದಾಯಿಕ ಸೀರೆಗಳ ಫ್ಯಾಷನ್ ಶೋದಲ್ಲಿ ಪಾಲ್ಗೊಂಡು ಮೆಚ್ಚುಗೆಗೆ ಪಾತ್ರರಾದರು.
ರಾಜ್ಯದ 8 ಕಂದಾಯ ಜಿಲ್ಲೆಗಳಿಂದ 600 ಕ್ಕೂ ಅಧಿಕ ಸದಸ್ಯೆಯರು ಇನ್ನರ್ ವೀಲ್ ಜಿಲ್ಲಾ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.










