ಧರ್ಮಸ್ಥಳ ಡಿ.5 : ಇನ್ನೂರು ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಹರಕೆ ಬಯಲಾಟ ಪ್ರದರ್ಶನದ ತಿರುಗಾಟ ಆರಂಭಗೊಂಡಿದೆ. ಇನ್ನು ಮುಂದಿನ 23 ಮೇ 2024ರವರೆಗೆ ಮೇಳದ ಕಲಾವಿದರು ಮೇಳದ ಗಣಪನೊಂದಿಗೆ ಸೇವಾರ್ಥಿಗಳ ಮನೆಗೆ ತೆರಳಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂದೇಶವನ್ನು ನೀಡುವ ಪೌರಾಣಿಕ ಪ್ರಸಂಗಗಳನ್ನು ಆಡಿ ತೋರಿಸುತ್ತಾರೆ.







