ಸೋಮವಾರಪೇಟೆ ಡಿ.5 : ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಮಹಿಳಾ ಸಮಾಜದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ಸುವರ್ಣ ಸಂಭ್ರಮ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಯ ಕನ್ನಡ ಭಾಷಾ ಪರೀಕ್ಷೆಯಲ್ಲಿ 125ಕ್ಕೆ 125 ಮತ್ತು ಪಿಯುಸಿಯಲ್ಲಿ 100ಕ್ಕೆ 100 ಅಂಕವನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪಟ್ಟಣದ ಓ.ಎಲ್.ವಿ ಕಾನ್ವೆಂಟ್‍ನ ವಿದ್ಯಾರ್ಥಿಗಳಾದ ಎಸ್.ಅಶ್ವಿಜಾ ರೈ, ಎಚ್.ಎಲ್. ದಿಶಾ, ಎಂ.ಒ.ದಿವಿನ್, ಕೆ.ಪಿ.ಮೋನಿಷ, ಒ.ಪಿ.ಪ್ರತಿಕ್ಷ, ಪ್ರತೀಕ್ ಜಿ ಶೆಟ್ಟಿ, ಕೆ.ರೋಹನ್, ಬಿ.ಒ.ರೋಶನ್, ಸಹನಾ ಬೆಳ್ಳೂರು, ಎಸ್.ವಿ.ಧನುಷ್, ಮಸಗೋಡು ಚನ್ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಮೃದು ಪ್ರವೀಣ್, ಎಸ್.ಎಸ್.ನಾಫಿದ, ಶನಿವಾರಸಂತೆ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ಪಿ.ಎಸ್.ಚಿನ್ಮಯಿ, ಎಸ್.ಕೆ. ಚಿನ್ಮಯ, ಫಾತಿಮಾ ತಶ್ರೀಫ್, ಬಿ.ಜಿ. ಇಂಚರ, ಕೂಡಿಗೆ ಮೊರಾರ್ಜಿ ಶಾಲೆಯ ಜಿ.ಎಲ್. ಭವ್ಯಶ್ರೀ, ಕೊಡ್ಲಿಪೇಟೆ ಶ್ರೀ ಸದಾಶಿವ ಸ್ವಾಮೀಜಿ ಆಂಗ್ಲ ಮಾಧ್ಯಮ ಶಾಲೆಯ ಡಿ.ಎಸ್. ಗಗನ್, ನಿಡ್ತ ಪ್ರೌಢಶಾಲೆಯ ಎಂ.ಎಸ್.ದೀಕ್ಷಿತ, ಎಚ್.ಅಪರ್ಣ, ಕೂಡಿಗೆ ಜ್ಞಾನೋಧಯ ಶಾಲೆಯ ಎನ್.ಎಂ. ಪ್ರತಿಕ್ಷ, ಅಂಕನಳ್ಳಿ ಪೌಢಶಾಲೆ ಎನ್.ಆರ್.ತಿಲಕ್, ಶನಿವಾರಸಂತೆ ವಿಘ್ನೇಶ್ವರ ಬಾಲಿಕ ಪ್ರೌಢಶಾಲೆ ಫಾತಿಮಾತ್ ಜೂರ, ಎಚ್.ಆರ್.ನಿಸರ್ಗ, ಮಾದಾಪುರ ಡಿ.ಚೆನ್ನಮ್ಮ ಪ್ರೌಢಶಾಲೆ ಎಸ್.ಕೆ. ರೋಷನ್, ಸೋಮವಾರಪೇಟೆ ವಿಶ್ವಮಾನವ ಕುವೆಂಪು ಪೌಢಶಾಲೆಯ ಕೆ.ಬಿ ಪ್ರಿಯಾಂಕ, ಗೌಡಳ್ಳಿ ಪ್ರೌಢಶಾಲೆ ಎಚ್.ಎಂ. ದೀಪಕ್, ಚೌಡ್ಲು ಸಾಂಧೀಪನಿ ಪ್ರೌಢಶಾಲೆಯ ಬಿ.ಎಂ. ನಿತೀಶ್, ಸೋಮವಾರಪೇಟೆ ಸಂತ ಜೋಸೆಫರ ಪ್ರೌಢಶಾಲೆಯ ಕೆ.ಎಂ.ಪ್ರಾಪ್ತಿ, ಎಂ.ಎಲ್. ಚಂದನ್, ಕೂಡಿಗೆ ಅ್ಯಂಜಲ್ ವಿದ್ಯಾನಿಕೇತನ್ ಎಸ್.ಎನ್ ಚೇತನ್, ಕೆ.ಕೆ.ಜಯಲಕ್ಷ್ಮೀ, ಎಸ್.ಬಿ.ಖುಷಿ, ಕೆ.ಜೆ.ಲೇಖನ, ಕೆ.ಎಸ್.ವಾತ್ಸಲ್ಯ, ಜ್ಞಾನವಿಕಾಸ ಪ್ರೌಢಶಾಲೆ ಎಸ್.ಎಸ್.ಧನ್ಯ, ತೋಳೂರುಶೆಟ್ಟಳ್ಳಿ ಡಾ. ಬಿ.ಆರ್ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಕೆ.ಎಸ್. ಶ್ರೇಯ, ಶಾಂತಳ್ಳಿ ಕುಮಾರ ಲಿಂಗೇಶ್ವರ ಪ್ರೌಢಶಾಲೆಯ ಸಚಿನ್, ಮನಸ್ವಿ, ಎ. ನಿಸರ್ಗ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕ.ಸಾ.ಪ. ತಾಲ್ಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಪ್ರಮುಖರಾದ ಜೆ.ಸಿ.ಶೇಖರ್, ನಾಗರಾಜ್, ರೇವತಿ ರಮೇಶ್, ಶ.ಗ.ನಯನಾತಾರಾ, ಎಂ.ಎ.ರುಬಿನಾ ಬಹುಮಾನ ವಿತರಿಸಿದರು.








