ಮಡಿಕೇರಿ ಡಿ.5 : ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ವತಿಯಿಂದ ವಿರಾಜಪೇಟೆಯಲ್ಲಿ ಮನೆ ಮನೆ ಕವಿಗೋಷ್ಠಿ, ಜಾನಪದ ಗೀತೆ ಗಾಯನ, ಪುಸ್ತಕ ಪರಿಚಯ ಮತ್ತು ಕವಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಸಮೂಹ ಮತ್ತು ಕಲಾ ಉತ್ಸವ ಕೊಡಗು-2023ರ ಕನ್ನಡ ಪ್ರಾಯೋಜಕತ್ವದಲ್ಲಿ ವಿರಾಜಪೇಟೆಯ ಮೊಗರಗಲ್ಲಿ ಕಲಾ ಪ್ರದರ್ಶನ ಸ್ಥಳದಲ್ಲಿ ನಡೆದ ಕಾರ್ಯಕ್ರಮವನ್ನು ವಿರಾಜಪೇಟೆ ಕ್ಷೇತ್ರದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪ್ರಕಾಶ್ ಉದ್ಘಾಟಿಸಿದರು.
ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರಿನ ನಿವೃತ್ತ ಪ್ರಾಂಶುಪಾಲ ನಾಟಕ ಭಾರ್ಗವ ಕೆಂಪರಾಜು ಹಾಜರಿದ್ದರು.
ಗಿರೀಶ್ ಕಿಗ್ಗಾಲು ಆಶಯ ನುಡಿಯಾಡಿದರು. ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಬಳಗದ ಸಂಸ್ಥಾಪಕ ಪಿ.ಎಸ್. ವೈಲೇಶ ಸ್ವಾಗತಿಸಿದರು. ನಿರೂಪಣೆಯನ್ನು ಎ.ವಿ.ಮಂಜುನಾಥ್, ಭಾಗ್ಯವತಿ ಮತ್ತು ಶಿವಮ್ಮ ವೈಲೇಶ್ ನಿರ್ವಹಿಸಿದರು. ಬಳಗದ ನಲ್ವತ್ತಕ್ಕೂ ಹೆಚ್ಚು ಕವಿಗಳು ಮತ್ತು ಗಾಯಕರು ಭಾಗವಹಿಸಿದರು.









