ಕಡಂಗ ಡಿ.5 : ಕೊಡಗು ಜಿಲ್ಲೆಯ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಕೊಟ್ಟಮುಡಿ ಮರ್ಕಝ್ ನ ನೂತನ ಕಾಲೇಜು ಕಟ್ಟಡ ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್ ಉದ್ಘಾಟನಾ ಸಮಾರಂಭವು 2024ನೇ ಜ.3 ರಂದು ಉದ್ಘಾಟನೆ ನಡೆಯಲಿದೆ ಎಂದು ನೆಡುವುಸದಾಗಿ ಕೊಡಗು ಜಿಲ್ಲಾ ಖಾಜಿ ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ದುಬೈನಲ್ಲಿ ಘೋಷಿಸಿದ್ದಾರೆ.
ಮರ್ಕಝಲ್ ಹಿದಾಯ ಕೊಟ್ಟಮುಡಿ ಯುಎಇ ರಾಷ್ಟ್ರೀಯ ಸಮಿತಿ ಆಯೋಜಿಸಿದ ಯುಎಇ ಯೂನಿಯನ್ ದಿನಾಚರಣೆ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಹಕೀಮ್ ಅಝಹರಿ ಉಸ್ತಾದರು ಉದ್ಘಾಟಿಸಿದರು.
ಜಲೀಲ್ ನಿಜಾಮಿ ಉಸ್ತಾದ್ ಅದ್ಯಕ್ಷತೆ ವಹಿಸಿದರು. ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಉಸ್ತಾದರು ಮುಖ್ಯ ಭಾಷಣ ಮಾಡಿದರು.
ಸಭೆಯಲ್ಲಿ ಕೊಡಗು ಸುನ್ನೀ ವೆಲ್ಫೇರ್ ಅಧ್ಯಕ್ಷ ಕೆ.ಕೆ.ಉಸ್ಮಾನ್ ಹಾಜಿ, ದುಬೈ ಜೋನಲ್ ಅಧ್ಯಕ್ಷ ಶಾಫಿ ಸಖಾಫಿ, ಅಹಮದ್ ಚಾಮೆ,ಮುಂತಾದ ಗಣ್ಯರು ಹಾಜರಿದ್ದರು.
ವರದಿ : ನೌಫಲ್ ಕಡಂಗ








