ನಾಪೋಕ್ಲು ಡಿ.6 : ಮೈಸೂರಿನಲ್ಲಿ ನಡೆದ ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ ಶಿಪ್ ನ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಮಡಿಕೇರಿ ಕ್ರೀಡಾ ಶಾಲೆಯ ವಿದ್ಯಾರ್ಥಿನಿ ಪಿ.ಡಿ.ಶ್ರಾವ್ಯ ಪ್ರಥಮ ಮತ್ತು ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ.
ಇವಳು ಮಡಿಕೇರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಸೆನ್ ಸೈ ಚಂದನ್ ಅವರಲ್ಲಿ ತರಬೇತಿ ಪಡೆಯುತ್ತಿದಾಳೆ. ಶ್ರಾವ್ಯ ಕುಂಜಿಲ ಗ್ರಾಮದ ದೇವಯ್ಯ ಮತ್ತು ಚಿತ್ರ ದಂಪತಿಯ ಪುತ್ರಿ.
ವರದಿ : ದುಗ್ಗಳ ಸದಾನಂದ








