ಮಡಿಕೇರಿ ಡಿ.6 : ದಲಿತ ಸಂಘಟನೆಗಳ ವತಿಯಿಂದ ಕೊಡ್ಲಿಪೇಟೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 67ನೇ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.
ಕೊಡ್ಲಿಪೇಟೆಯ ಬಸ್ ನಿಲ್ದಾಣದಲ್ಲಿ ಡಾ.ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣದ ಸ್ಥಳದಲ್ಲಿ ದಲಿತ ಸಂಘಟನೆಗಳ ಪದಾಧಿಕಾರಿಗಳು, ದಲಿತ ಬಂಧುಗಳು ಹಾಗೂ ಸಾರ್ವಜನಿಕರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದರು.
ದಲಿತ ಸಂಘಟನೆಯ ಮುಖಂಡ ಜೆ.ಎಲ್.ಜನಾರ್ಧನ ಮಾತನಾಡಿ ಡಾ.ಅಂಬೇಡ್ಕರ್ ಅವರ ಆದರ್ಶ ಇಡೀ ವಿಶ್ವಕ್ಕೇ ಮಾದರಿಯಾಗಿದೆ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದ ಅವರು ಸಂವಿಧಾನ ರಚನೆಯ ಮೂಲಕ ದೇಶಕ್ಕೆ ಸಮಾನತೆಯ ಪಾಠ ಹೇಳಿದರು ಎಂದರು.
ಸಂಘಟನೆಯ ಪ್ರಮುಖರಾದ ಡಿ.ಸಿ.ಸೋಮಣ್ಣ, ವೀರಭದ್ರ, ಕೇಶವ, ಡಿ.ಬಿ.ವಿಜಯ, ಕೆ.ಎನ್.ಇಂದ್ರೇಶ್, ದಯಾನಂದ, ವಸಂತ್, ಸತ್ಯಪ್ರಕಾಶ್, ದೇವರಾಜ್, ನಟೇಶ್, ಹೇಮಂತ್, ಗೋವಿಂದ, ಡಿ.ಎಸ್.ವಸಂತ, ಗೌತಮ್, ವಿಜಯ್, ಮಂಜುನಾಥ್ ಸೇರಿದಂತೆ ಅನೇಕರು ಈ ಸಂದರ್ಭ ಹಾಜರಿದ್ದು ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ನಮಿಸಿದರು.









