ಗೋಣಿಕೊಪ್ಪ ಡಿ.6 : ಶಿಕ್ಷಣದಿಂದ ಮಾತ್ರ ಈ ಸಮಾಜದಲ್ಲಿ ಸಮಾನತೆಯ ಮೌಲ್ಯಾಧಾರಿತ ಬದುಕು ನಡೆಸಲು ಸಾಧ್ಯ ಎಂದು ಕಾವೇರಿ ಕಾಲೇಜು ಉಪನ್ಯಾಸಕ ವನಿತ್ ಕುಮಾರ್ ತಿಳಿಸಿದರು.
ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ ನಿಟ್ಟೂರು ಗ್ರಾ.ಪಂ ಸಭಾಂಗಣದಲ್ಲಿ ನಡೆದ 67ನೇ ಮಾಹ ಪರಿನಿರ್ಮಾಣ ಮತ್ತು ಸಂವಿಧಾನ ಕುರಿತು ಜನ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಶೋಷಿತ ಸಮುದಾಯಗಳು ಬದುಕು ನಡೆಸಲು ಜ್ಞಾನದ ಅಗತ್ಯವಿದೆ. ಅಂಬೇಡ್ಕರ್ ಹಾದಿಯಲ್ಲಿ ಕಲಿಕೆಯ ಪ್ರಾಮುಖ್ಯ ತೆಯನ್ನು ತಿಳಿದುಕೊಳ್ಳಬೇಕು ಎಂದರು.
ದುಷ್ಚಟಗಳಿಂದ ದೂರ ಉಳಿದು ಗೌರವಿತವಾಗಿ ಬದುಕು ನಡೆಸಲು ಚಿಂತಿಸಬೇಕು. ವಿದ್ಯಾರ್ಹತೆಯಿಂದ ಉತ್ತಮ ಉದ್ಯೋಗ ಪಡೆದು ಆರ್ಥಿಕವಾಗಿ ಚೇತರಿಸಿಕೊಳ್ಳಲು ಪ್ರಯತ್ನಿಸಬೇಕು ಇದರಿಂದ ಮತ್ತೊಂಬರ ಮುಂದೆ ಕೈಚಾಚುವುದು ತಪ್ಪುತ್ತದೆ ಎಂದು ಹೇಳಿದರು.
ನೋಟರಿ, ವಕೀಲ ಕಾಶಿಯಪ್ಪ ಮಾತನಾಡಿ ಸಂವಿಧಾನ ರಚನೆ ಮಾಡಿದ ಅಂಬೇಡ್ಕರ್ ಹಿಂದೂಳಿದ ಸಮೂದಯಗಳು ಸಮಾನತೆಯ ಬದುಕು ನಡೆಸಲು ಅರ್ಹರಗಾಬೇಕು ಎಂಬ ಚಿಂತಿಸಿದರು.
ಪರಿಣಾಮ ಇಂದು ಸರ್ಕಾರಿ ಕೆಲಸಗಳ ಅಧಿಕಾರಿ, ಸಿಬ್ಬಂದಿಗಳಗುತ್ತಿದ್ದಾರೆ ಇದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪರಶುರಾಮ್ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಮಾತನಾಡಿ, ಸಮಾನತೆ ಯಲ್ಲಿ ಬದುಕು ನಡೆಸುವ ಹಕ್ಕು ನಮಗೆ ಸಿಗಬೇಕು. ನಾವುಗಳು ಸಹ ಬದುಕು ಹಕ್ಕನ್ನು ಹೊಂದಿದೆವೆ. ಅ ಉದ್ದೆಶದಲ್ಲಿ ನಾವು ಪರಿಪೂರ್ಣ ಜೀವನ ನಡೆಸಲು ಹಕ್ಕುದಾರರು ಅದರೆ ನಮಗೆ ಈ ಮೂಲ ಸೌಕರ್ಯ ಸಿಗಲು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಈ ಕಾರಣಕ್ಕೆ ನಾವು ವಿದ್ಯಾವಂತರಾಗಬೇಕು ಎಂದು ಹೇಳಿದರು.
ಸಾಹಿತಿ, ಪತ್ರಕರ್ತ ಜಗದೀಶ್ ಜೋಡುಬೀಟಿ ಮಾತನಾಡಿ, ಹಿಂದುಳಿದ, ಶೋಷಿತರ ಬದುಕು ಕಾರುಣೆಯಿಂದ ಕೂಡಿರದೆ ಸಮಾಜದ ಮಾನವ ಪ್ರೇಮಾ, ಬಾಂಧವ್ಯಗಳಿಂದ ತುಂಬಬೇಕು. ಶೋಷಿತ ಸಮೂದಯಗಳು ಅಸ್ಪಶ್ಯತೆ ಕಿಳೆರಿಮೆಯಿಂದ ದೂರ ಉಳಿಯಲು ಶಿಕ್ಷಣದಿಂದ ಸಾಧ್ಯವಾಗುತ್ತದೆ. ಅಂಬೇಡ್ಕರ್ ಸಮಾಜದಲ್ಲಿದ್ದ ಜಾತಿಯ ಅನಿಷ್ಟ ಪದ್ಧತಿಗಳ ವಿರುದ್ಧ ಶಿಕ್ಷಣದ ಮೂಲಕ ಸಮರ ಸಾರಿದ್ದಾರ್ದ್. ಅವರ ಆದರ್ಶಗಳನ್ನು ಬದಕಿನ ಸಂಕಷ್ಟಗಳನ್ನು ತಿಳಿದು ಅವರ ಕನಸನ್ನು ನನಸು ಮಾಡಲು ಪ್ರತಿಯೊಬ್ಬರು ಶ್ರಮಪಡಬೇಕು ಈ ಉದ್ದೇಶ ಈಡೇರಿದಾಗ ಅಂಬೇಡ್ಕರ್ ಹೋರಾಟಕ್ಕೆ ಅರ್ಥ ಸಿಗುತ್ತದೆ ಎಂದು ತಿಳಿಸಿದರು.
ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿ ನಮಿಸುವುದರೊಂದಿಗೆ ಕಾರ್ಯಕ್ರಮಕ್ಕೆ ನಿಟ್ಟೂರು ಗ್ರಾಪಂ ಅಧ್ಯಕ್ಷೆ ಅಮ್ಮುಣಿ ಚಾಲನೆ ನೀಡಿದರು.
ಅತಿಥಿಗಳಾಗಿ, ಉಪಾಧ್ಯಕ್ಷ. ಚೆಕ್ಕೇರ ಸೂರ್ಯ ಅಯ್ಯಪ್ಪ, ದ.ಸಂ.ಸ ಜಿಲ್ಲಾ ಖಜಾಂಚಿ ಕುಮಾರ್ ಮಹದೇವ್, ಜಿಲ್ಲಾ ಸಂಘಟನೆ ಸಂಚಾಲಕ ಹೆಚ್.ಬಿ ಮುರುಗ, ನಿಟ್ಟೂರು ಗ್ರಾಮ ಸಂಚಾಲಕ ವಿಜಯ, ಹುಡ್ಕ, ಕಾಳ, ಪಾಲಿಬೆಟ್ಟ ಗ್ರಾಪಂ ಸದಸ್ಯ ನಾಸಿರ್ ಉಪಸ್ಥಿತಿಯಲ್ಲಿದರು.








