ಗೋಣಿಕೊಪ್ಪಲು ಡಿ.6 : ಮನಸು ಶಾಂತಿಯುತವಾಗಿ ಕೂಡಿರಲು ಕವಿತೆಗಳ ಓದಿನಿಂದ ಸಾಧ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪ್ರಕಾಶ್ ಅಭಿಪ್ರಾಯಪಟ್ಟರು.
ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು, ಸಾಹಿತ್ಯ ಸಂವರ್ಧಕ ಪರಿಷತ್ತು, ಛಂದೋಬದ್ಧ ಕಾವ್ಯ ಸೌಂವರ್ದಕ ಪರಿಷತ್ತು, ಬೊಮ್ಮಲಿಂಗೇಶ್ವರ ಪ್ರಕಾಶನ, ಕಲಾ ಉತ್ಸವ ಕೊಡಗು, ಸಹಯೋಗ ದಲ್ಲಿ ವಿರಾಜಪೇಟೆ ನಗರದ ಮೊಗರಗಲ್ಲಿಯಲ್ಲಿ ನಡೆದ ಕವಿ ಜಗದೀಶ್ ಜೋಡುಬೀಟಿ ಇವರ ಪುಸ್ತಕ ಪರಿಚಯ ಕವಿಗಳೊಂದಿಗೆ ಸಂವಾದ, ಕವಿಗೋಷ್ಠಿ ಮತ್ತು ಜಾನಪದ ಗೀತೆ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕದನವನ್ನತಡೆಯುವ ಶಕ್ತಿ ಮತ್ತು ಸಂತಾನವನ್ನು ನಡೆಸುವ ಯುಕ್ತಿ ಕಾವ್ಯದೊಳಡಾಗಿದೆ. ಪ್ರತಿಯೊಬ್ಬರ ಮನಸಿನಲ್ಲೂ ಕಾವ್ಯ ನೆಲೆನಿಂತಾಗ ಈ ಸಮಾಜದ ಸಂಘರ್ಷಗಳಿಂದ ಹೊರಗುಳಿದು ಉತ್ತಮ ಮಾನವೀಯ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ನೊಂದವರ ಬೆಂದವರ ಹೃದಯಗಳನ್ನು ಅರಿತುಕೊಂಡಗ ಕವಿ ಹೃದಯಗಳು ಕಾವ್ಯ ರಚಿಸಬೇಕು. ವಚಾಳಿತನವನ್ನು ಬಿಟ್ಟು ಮೌನತೆಯನ್ನು ಅಪ್ಪಿಕೊಂಡಾಗ ಕವಿತೆಗಳು ಅರಳುತ್ತದೆ ಎಂದರು.
ನಿವೃತ ಪ್ರಾಂಶುಪಾಲ ನಾಟಕ ಭಾರ್ಗವ ಕೆಂಪರಾಜು ಮಾತನಾಡಿ, ಮನುಷ್ಯ ಜೀವನದ ಪಾರಂಪರಿಕ ಹಿನ್ನೆಲೆಯಲ್ಲಿ ಕಾವ್ಯವನ್ನ ಅಪ್ಪಿಕೊಂಡಾಗಿದೆ. ಕವಿ ಅಳಿದು ಹೋಗಬಹುದು ಆದರೆ ಉತ್ತಮ ಕಾವ್ಯ ಅಳಿದು ಹೋಗಲು ಸಾಧ್ಯವಾಗುವುದಿಲ್ಲ. ಹೀಗಾಗಿ, ರಾಮಾಯಣ, ಮಹಾಭಾರತ ಮಾಹಕಾವ್ಯ ಇಂದಿಗೂ ಸಮಾಜದಲ್ಲಿ ಉಸಿರಾಡುತಿದೆ. ರಾಜ, ಮಹಾರಾಜರ ಅಸ್ಥಾನದಲ್ಲೂ ಕವಿಗಳಿಗೆ ಗೌರವವನ್ನು ನೀಡಲಾಗುತ್ತಿತ್ತು.
ಇಂದಿಗೂ ಹಲವು ಸಂಘಟನೆಗಳು ಕಾವ್ಯಗೋಷ್ಠಿಗಳು ನಡೆಸುವ ಮೂಲಕ ಕವಿಗಳಿಗೆ ಗೌರವ ಸಲ್ಲಿಸುತ್ತಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ.
ಇದು ಬಹಳಷ್ಟು ಜನ ನಮಗೆ ಒಲ್ಲದ ಪ್ರಶಸ್ತಿಗಳ ಹಿಂದೆ ಬಿದ್ದು ಬೀಗುತ್ತಿರುವುದು ಕಾವ್ಯ ಲೋಕದೊಳಗೆ ವಿಹಾರಿಸುವ ಕವಿ ಹೃದಯಗಳಿಗೆ ಶೋಭಿಸುವ ವ್ಯಕ್ತಿತ್ವವಲ್ಲ ಹಣಕ್ಕಾಗಿ ನೀಡುವ ಪ್ರಶಸ್ತಿಗಳ ಹಿಂದೆ ಹೋಗದಂತೆ ಸಲಹೆ ನೀಡಿದರು.
ಕವಿ, ಪತ್ರಕರ್ತ ಜಗದೀಶ್ ಜೋಡುಬೀಟಿ ಮಾತನಾಡಿ, ಹೆಚ್ಚು ಪುಸ್ತಕಗಳನ್ನು ಓದಿಕೊಂಡಾಗ ಕವಿತೆಗಳನ್ನು ವಿಶಿಷ್ಟ ವಿಭಿನ್ನತೆಯಲ್ಲಿ ಬರೆಯಬಹುದಾಗಿದೆ. ಮತ್ತೊಬ್ಬರ ಕಾವ್ಯಗಳನ್ನು ಆಸ್ವಾದಿಸದೆ ಉತ್ತಮ ಕಾವ್ಯ ರಚಿಸಲು ಸಾಧ್ಯವಾಗುವುದಿಲ್ಲ.
ಸಮಾಜದಲ್ಲಿ ನಡೆಯುವ ಘಟನೆಗಳಿಗೆ ಮನಸ್ಸು ಸ್ಪಂದಿಸುತ್ತ ಆ ಹಿನ್ನೆಲೆಯಲ್ಲಿ ಕಾವ್ಯವನ್ನು ರಚಿಸಬೇಕಾಗಿದೆ. ಸಮಾಜದ ಸುಖ ಮತ್ತು ಸಂಕಷ್ಟಗಳಿಗೆ ಮಿಡಿಯುವ ಹೃದಯ ಕವಿಯದಾಗಿರಬೇಕು ಎಂದು ಹೇಳಿದರು.
ಭಾμÉಯ ಹಿಡಿತ, ವಸ್ತು ವಿಚಾರಗಳ ಬಗ್ಗೆ ಗಮನಹರಿಸುವ ಅಂತರ ಶೀಲ ಕಾವ್ಯವನ್ನು ಸೃಷ್ಟಿಸಬೇಕಾಗಿದೆ. ಟಿವಿ ಮಾಧ್ಯಮಗಳ ನೋಟದಿಂದ ಹೊರಗೊಳಿದು ಕವಿತೆಗಳನ್ನು ಹೆಚ್ಚಾಗಿ ಆಸ್ವಾದಿಸಬೇಕು ಎಂದು ತಿಳಿಸಿದರು.
ಲೇಖಕಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಅಧ್ಯಕ್ಷತೆಯಲ್ಲಿ ಮನೆ ಮನೆ ಕಾವ್ಯ ಗೋಷ್ಠಿ ಪರಿಷತ್ ಸಂಚಾಲಕ, ಪಿ.ಎಸ್ ವೈಲೇಶ ಕೊಡಗು ಅವರು ಕವಿ ಗೋಷ್ಠಿ ಮತ್ತು ಕವಿ ಜಗದೀಶ್ ಜೋಡುಬೀಟಿ ಅವರ ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ ಸಂಕಲನದ ಕವಿತೆಗಳ ಪರಿಚಯ ಕವಿಯೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಲೇಖಕ ಗಿರೀಶ್ ಕಿಗ್ಗಾಲು, ಕವಿಯತ್ರಿ ಭಾಗ್ಯವತಿ ಅಣ್ಣಪ್ಪ ಗಾಯಕಿ ಟಿ.ವಿ, ಸುಪ್ರೀತ ದಿಲೀಪ್ ಚಿತ್ರ ಕಲಾವಿದ ಸಾಧಿಕ್ ಹಂಸ ಇದ್ದರು. ಸುಮಾರು ಮೂವತೈದಕ್ಕು ಹೆಚ್ಚು ಕವಿಗಳು ಕವಿ ವಾಚನದ ಮಾಡಿದರು.









