ಮಡಿಕೇರಿ ಡಿ.6 : ನಗರದ ಕೊಡಗು ವಿದ್ಯಾಲಯದಲ್ಲಿ ಡಿ.9 ರಂದು ವಾಷಿ೯ಕ ಕ್ರೀಡಾ ದಿನಾಚರಣೆ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9.30 ಗಂಟೆಗೆ ಕ್ರೀಡಾ ದಿನಾಚರಣೆಯನ್ನು ಶಾಲಾ ಮೈದಾನದಲ್ಲಿ ನಿವೃತ್ತ ಏರ್ ಮಾಷ೯ಲ್ ಕೆ.ಸಿ.ಕಾಯ೯ಪ್ಪ ಉದ್ಘಾಟಿಸಲಿದ್ದಾರೆ. ವಿದ್ಯಾಥಿ೯ಗಳಿಂದ ಪಥಸಂಚಲನ, ವಿವಿಧ ರೀತಿಯ ಕ್ರೀಡೆಗಳು, ಪ್ರತಿಭಾ ಪ್ರದಶ೯ನ ಸೇರಿದಂತೆ ವಿವಿಧ ಕಾಯ೯ಕ್ರಮಗಳು ನಡೆಯಲಿದೆ ಎಂದು ಕೊಡಗು ವಿದ್ಯಾಲಯದ ಪ್ರಕಟಣೆ ತಿಳಿಸಿದೆ.








