ಮಡಿಕೇರಿ,ಡಿ.7 : ಕರ್ನಾಟಕ ಸುವರ್ಣ ಸಂಭ್ರಮ ವರ್ಷಾಚರಣೆಯ ಅಂಗವಾಗಿ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಇದೇ ಡಿ.17ರಂದು ಕುಶಾಲನಗರದಲ್ಲಿ ಹುತ್ತರಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ವಿಷೇಷವಾಗಿ ಹಮ್ಮಿಕೊಳ್ಳಲಾಗಿರುವ ಈ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಚಿಸುವವರು ಡಿ.10 ನೇ ತಾರೀಕಿನೊಳಗೆ ನೊಂದಾಯಿಸಿಕೊಳ್ಳಬಹುದಾಗಿದೆ. ನೋಂದಾವಣಿ ಹಾಗೇ ಹೆಚ್ಚಿನ ಮಾಹಿತಿಗಾಗಿ
ಲೋಕೇಶ್ ಸಾಗರ್ (9980988123), ನಾಗೇಗೌಡ (9448072619) ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಸ್ನೇಹ ಸಿರಿ ಬಳಗದ ಪ್ರಕಟಣೆ ತಿಳಿಸಿದೆ.








