ಮಡಿಕೇರಿ ಡಿ.9 : ಕುಶಾಲನಗರ ಪುರಸಭೆಯ ಎಸ್.ಎಫ್.ಸಿ ಶೇ.5 ಹಾಗೂ ಎಸ್‍ಎಫ್‍ಸಿ (ಎಸ್‍ಸಿಪಿ)(ಟಿಎಸ್‍ಪಿ) ಶೇ.7.25 ರ ಅನುದಾನದಡಿ ವಿವಿಧ ವೈಯಕ್ತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಸೌಲಭ್ಯ ಪಡೆದುಕೊಳ್ಳಲು ಇಚ್ಚಿಸುವ ಅರ್ಹ ಅಭ್ಯರ್ಥಿಗಳು ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಡಿ.18 ರಂದು 5.30 ಗಂಟೆಯೊಳಗೆ ಮುಖ್ಯಾಧಿಕಾರಿಗಳು, ಪುರಸಭೆ, ಕುಶಾಲನಗರ ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಯನ್ನು ಕುಶಾಲನಗರ ಪುರಸಭೆ ಕಚೇರಿಯಲ್ಲಿ ತಿಳಿದುಕೊಳ್ಳಬಹುದು.
ಎಸ್‍ಎಫ್‍ಸಿ(ಎಸ್‍ಸಿಪಿ) ಮತ್ತು ಎಸ್‍ಎಫ್‍ಸಿ(ಟಿಎಸ್‍ಪಿ) ಅನುದಾನ: 2019-20 ಮತ್ತು 2020-21 ರಲ್ಲಿ ಯಶಸ್ವಿನಿ ಯೋಜನೆಯಡಿ ಗುರುತಿಸಲ್ಪಟ್ಟ ದವಾಖಾನೆಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದವರಿಗೆ ಒಂದು ಬಾರಿ ಸಹಾಯ ಧನ.
ಅರ್ಜಿ ಸಲ್ಲಿಸಲು ಅರ್ಹತೆ ಹಾಗೂ ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಫಲಾನುಭವಿಯ 2 ಭಾವಚಿತ್ರ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ(ಆದಾಯವು 3 ಲಕ್ಷದೊಳಗಿರಬೇಕು). ಶಸ್ತ್ರ ಚಿಕಿತ್ಸೆಗೆ ಸಂಬಂಧಪಟ್ಟಂತೆ ದಾಖಲೆಗಳು ಮತ್ತು ಮೂಲ ಬಿಲ್ಲುಗಳು, ಅರ್ಜಿದಾರರು ಸೌಲಭ್ಯ ಪಡೆಯಲು ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಿಲ್ಲವೆಂದು/ ಸುಳ್ಳು ಮಾಹಿತಿ ನೀಡಿಲ್ಲವೆಂದು ನೋಟರೀಕೃತ ಪ್ರಮಾಣ ಪತ್ರ (ಮಾದರಿ ನಮೂನೆಯನ್ನು ಕಚೇರಿಯ ನಾಮಫಲಕದಲ್ಲಿ ಅಳವಡಿಸಲಾಗಿದೆ) ಅರ್ಜಿದಾರರ ಆಯ್ಕೆಯನ್ನು ಪುರಸಭೆ ಕಾಯ್ದಿರಿಸಿಕೊಂಡಿದೆ.
ಎಸ್‍ಎಫ್‍ಸಿ ಅನುದಾನ ಶೇ.5 ರಂತೆ ವಿಕಲ ಚೇತನರ ಕಲ್ಯಾಣ ನಿಧಿ: 2022-23 ಮತ್ತು 2023-24 ನೇ ಸಾಲಿನಲ್ಲಿ ಕುಶಾಲನಗರ ಪುರಸಭೆ ವ್ಯಾಪ್ತಿಯ ವಿಕಲಚೇತನ ಫಲಾನುಭವಿಗಳಿಗೆ ಪೋಷಣಾ ಭತ್ಯೆ ನೀಡುವುದು. ವಿಕಲಚೇತನರಿಗಾಗಿ ಅವಶ್ಯವಿರುವ ಸಲಕರಣೆಗಳು ಒದಗಿಸುವುದು(2021-22ನೇ ಸಾಲು)
ಅರ್ಜಿ ಸಲ್ಲಿಸಲು ಅರ್ಹತೆ ಹಾಗೂ ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಫಲಾನುಭವಿಯ 2 ಭಾವಚಿತ್ರ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ(ಆದಾಯವು 3 ಲಕ್ಷದೊಳಗಿರಬೇಕು). ಅಂಗವಿಕಲತೆಯ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಪಡೆದಿರುವ ಪ್ರಮಾಣ ಪತ್ರದ ಪ್ರತಿ, ಅರ್ಜಿದಾರರು ಸೌಲಭ್ಯ ಪಡೆಯಲು ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಿಲ್ಲವೆಂದು/ ಸುಳ್ಳು ಮಾಹಿತಿ ನೀಡಿಲ್ಲವೆಂದು ನೋಟರೀಕೃತ ಪ್ರಮಾಣ ಪತ್ರ (ಮಾದರಿ ನಮೂನೆಯನ್ನು ಕಚೇರಿಯ ನಾಮಫಲಕದಲ್ಲಿ ಅಳವಡಿಸಲಾಗಿದೆ) ಅರ್ಜಿದಾರರ ಆಯ್ಕೆಯನ್ನು ಪುರಸಭೆ ಕಾಯ್ದಿರಿಸಿಕೊಂಡಿದೆ.
ಎಸ್‍ಎಫ್‍ಸಿ ಅನುದಾನ ಶೇ.7.25 ಅನುದಾನ: 2022-23 ನೇ ಸಾಲಿಗೆ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಬಡ ಜನರ ಶಸ್ತ್ರಚಿಕಿತ್ಸೆಗೆ ಸಹಾಯಧನ ನೀಡುವುದು.
ಅರ್ಜಿ ಸಲ್ಲಿಸಲು ಅರ್ಹತೆ ಹಾಗೂ ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನಚೀಟಿ, ಆಧಾರ್ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಫಲಾನುಭವಿಯ 3 ಭಾವಚಿತ್ರ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ(ಆದಾಯವು 3 ಲಕ್ಷದೊಳಗಿರಬೇಕು). ಶಸ್ತ್ರ ಚಿಕಿತ್ಸೆಗೆ ಸಂಬಂಧಪಟ್ಟಂತೆ ದಾಖಲೆಗಳು ಮತ್ತು ಮೂಲ ಬಿಲ್ಲುಗಳು, ಅರ್ಜಿದಾರರು ಸೌಲಭ್ಯ ಪಡೆಯಲು ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಿಲ್ಲವೆಂದು/ ಸುಳ್ಳು ಮಾಹಿತಿ ನೀಡಿಲ್ಲವೆಂದು ನೋಟರೀಕೃತ ಪ್ರಮಾಣ ಪತ್ರ (ಮಾದರಿ ನಮೂನೆಯನ್ನು ಕಚೇರಿಯ ನಾಮಫಲಕದಲ್ಲಿ ಅಳವಡಿಸಲಾಗಿದೆ). ಅರ್ಜಿದಾರರ ಆಯ್ಕೆಯನ್ನು ಪುರಸಭೆ ಕಾಯ್ದಿರಿಸಿಕೊಂಡಿದೆ.
ಕುಶಾಲನಗರ ಪುರಸಭೆ ವ್ಯಾಪ್ತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೆ ಸಹಾಯಧನ ನೀಡುವುದು. ಅರ್ಜಿ ಸಲ್ಲಿಸಲು ಅರ್ಹತೆ ಹಾಗೂ ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನಚೀಟಿ, ಆಧಾರ್ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಫಲಾನುಭವಿಯ 3 ಭಾವಚಿತ್ರ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ(ಆದಾಯವು 3 ಲಕ್ಷದೊಳಗಿರಬೇಕು). ಅರ್ಜಿದಾರರು ಸೌಲಭ್ಯ ಪಡೆಯಲು ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಿಲ್ಲವೆಂದು/ ಸುಳ್ಳು ಮಾಹಿತಿ ನೀಡಿಲ್ಲವೆಂದು ನೋಟರೀಕೃತ ಪ್ರಮಾಣ ಪತ್ರ (ಮಾದರಿ ನಮೂನೆಯನ್ನು ಕಚೇರಿಯ ನಾಮಫಲಕದಲ್ಲಿ ಅಳವಡಿಸಲಾಗಿದೆ) ಅರ್ಜಿದಾರರ ಆಯ್ಕೆಯನ್ನು ಪುರಸಭೆ ಕಾಯ್ದಿರಿಸಿಕೊಂಡಿದೆ ಎಂದು ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ತಿಳಿಸಿದ್ದಾರೆ.









