Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕೊಡವ (ಅರಮನೆ) ಪಾಲೆ ಜನಾಂಗದ ಅಭ್ಯುದಯಕ್ಕಾಗಿ ಒತ್ತಾಯ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕೊಡವ (ಅರಮನೆ) ಪಾಲೆ ಜನಾಂಗದ ಅಭ್ಯುದಯಕ್ಕಾಗಿ ಒತ್ತಾಯ

ಡಿಸೆಂಬರ್ 8, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಡಿ.8 :  ಕೊಡವ ಪಾಲೆ ಜನಾಂಗದ ಸಾಮಾಜಿಕ ಮುನ್ನಲೆಗೆ ಸಹಕರಿಸುವಂತೆ ಕೊಡವ(ಅರಮನೆ) ಪಾಲೆ ಜನಾಂಗದ ಸಮಾಜವು ಕೊಡವಾಮೆರ ಕೊಂಡಾಟ ಸಂಘಟನೆಗೆ  ಮನವಿ ಮಾಡಿದೆ.

ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ  ಚಾಮೆರ ದಿನೇಶ್ ಬೆಳ್ಯಪ್ಪ ಅವರನ್ನು ಮೈಸೂರಿನಲ್ಲಿ ಭೇಟಿಯಾದ ಕೊಡವ ಪಾಲೆ ಜನಾಂಗದ ನಿಯೋಗವು ಕೊಡಗಿನ ಆದಿಮೂಲ ನಿವಾಸಿಗಳಾಗಿ ಕೊಡವರೊಂದಿಗೆ ಬಾಳಿ ಬಂದಿರುವ, ಕೊಡವ(ಅರಮನೆ) ಪಾಲೆ ಜನಾಂಗದ ಸಾಮಾಜಿಕ ಮುನ್ನಲೆಗೆ ಸಹಕರಿಸುವಂತೆ ಮತ್ತು ಟ್ರೇಡ್ ಮಾರ್ಕ್ ಆಗಿ ನೋಂದಾಯಿಸಲ್ಪಟ್ಟಿರುವ ಕೊಡವ ಲೋಗೋವನ್ನು ಮೂಲತನದ ಆಧಾರದಲ್ಲಿ ಬಳಸಲು ಅನುವು ಮಾಡುವಂತೆ ಮನವಿ ಮಾಡಿದರು.

ಕೊಡವರೊಂದಿಗೆ ಪಾಲೆ ಜನಾಂಗದ ಸಂಬಂಧ, ಬೆಳೆದು ಬಂದ ಹಾದಿ, ಇತಿಹಾಸ ಈಗಿನ ಸ್ಥಿತಿಗತಿಯ ಕುರಿತು ಕೂಲಂಕುಶವಾಗಿ ಚರ್ಚಿಸಿದರು. ಅಲ್ಲದೆ ಮೂಲ ಕೊಡವ ಪದ್ಧತಿ ಪರಂಪರೆಯನ್ನೇ ಅನುಸರಿಸುತ್ತಾ ಇಂದಿಗೂ ಕೊಡವರೊಂದಿಗೆ ಸಾಂಪ್ರದಾಯಿಕ ಮತ್ತು ಭಾವನಾತ್ಮಕ ಹಾಗೂ ದೈವಿಕ ಸಂಬಂಧಗಳನ್ನು ಇಟ್ಟುಕೊಂಡಿರುವ, ಕೊಡವ ಪಾಲೆ ಜನಾಂಗವು ಇಂದು ಅಳಿವಿನ ಅಂಚಿನಲ್ಲಿದ್ದು, ಹಿರಿಯಣ್ಣ ನಂತ್ತಿರುವ ಕೊಡವರು ನಮ್ಮ ಸಾಮಾಜಿಕ ರಕ್ಷಣೆಗೆ ಸಹಕರಿಸಬೇಕೆಂದರು.

ಕೊಡವ ಪರಂಪರೆಯ ಹೆಗ್ಗುರುತಾಗಿರುವ ತೋಕ್, ಒಡಿಕತ್ತಿ, ಪೀಚೆಕತ್ತಿ ಸೇರಿದ ಲೋಗೋವನ್ನ ಟ್ರೇಡ್ ಮಾರ್ಕ್ ಆಕ್ಟ್ ಪ್ರಕಾರ ನೋಂದಾಯಿಸಿರುವು ಕೊಡವಾಮೆರ ಕೊಂಡಾಟ ಸಂಘಟನೆಯ ಐತಿಹಾಸಿಕ ಸಾಧನೆಯಾಗಿದ್ದು, ಇದಕ್ಕಾಗಿ ಸಂಘಟನೆಯ ಶ್ರಮವನ್ನು ಶ್ಲಾಗಿಸುತ್ತೆವೆ ಎಂದರು.

ಇದೇ ಸಂಧರ್ಭದಲ್ಲಿ 23ಮೂಲ ನಿವಾಸಿಗಳು ಈ ಲೋಗೋವನ್ನು ಬಳಸಬಹುದು ಎಂದಿರುವಲ್ಲಿ, ಕೊಡವ (ಅರಮನೆ) ಪಾಲೆ ಜನಾಂಗ ಬಿಟ್ಟು ಹೋಗಿದ್ದು, ತಲೆತಲಾಂತರದಿಂದ ಕೊಡವ ಪರಂಪರೆಯೊಂದಿಗೆ ಬದುಕುತ್ತಿರುವ ನಮಗೂ ಬಳಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

ಆದಿ ಬುಡಕಟ್ಟು ಜನಾಂಗವಾಗಿರುವ ಕೊಡವ ಪಾಲೆ ಜನಾಂಗವು, ಈ ಹಿಂದೆ ಸರ್ಕಾರದ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ್ದು, ಹಿಂದೆ ದಾಖಲೆಯಲ್ಲೂ ಉಲ್ಲೇಖವಿತ್ತು, ಆದರೆ ಇದೀಗ ತಾಂತ್ರಿಕ ಬದಲಾವಣೆಯಿಂದ ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಮರಳಿ ಬುಡಕಟ್ಟು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರ್ಕಾರ ಮತ್ತು ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದ್ದು, ತಾವೂ ಸಹಕರಿಸುವಂತೆ ಕೋರಿದರು.

ಈ ಸಂದರ್ಭ ಮಾತನಾಡಿದ ಕೊಡವಾಮೆರ ಕೊಂಡಾಟ ಸಂಘಟನೆ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ, ಕೊಡವ ಪಾಲೆ ಜನಾಂಗದ ಕೊಡಗಿನ ಅಸ್ತಿತ್ವದ ಬಗ್ಗೆ ಹಲವು ಜಾನಪದ ಹಿನ್ನೆಲೆಯ ಆಧಾರಗಳಿದ್ದು, ಕೊಡವರೊಂದಿಗೆ ಹಲವು ಸಂಬಂಧಗಳು ಇಂದಿಗೂ ಇದೆ. ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಕೊಡವ ಪಾಲೆ ಜನಾಂಗದ ಶ್ರೇಯಕ್ಕೆ ನಮ್ಮ ಸಹಕಾರ ಇರಲಿದ್ದು, ಈ ಕುರಿತು ಹಿರಿಯರೊಂದಿಗೂ ಚರ್ಚಿಸಲಾಗುವುದು, ಪರಿಶಿಷ್ಟ ವರ್ಗದಿಂದ ಪರಿಶಿಷ್ಟ ಪಂಗಡಕ್ಕೆ ಮರಳಲು ಕಾನೂನಿನ ವ್ಯಾಪ್ತಿಯಲ್ಲಿ ಸಹಕರಿಸುತ್ತೇವೆ ಎಂದರು.

ನೋಂದಾಯಿತ ಕೊಡವ ಲೋಗೋ ಬಳಕೆಯಲ್ಲಿ ಕೊಡವ ಪಾಲೆ ಜನಾಂಗದ ಹೆಸರು ಬಿಟ್ಟುಹೋಗಿದ್ದು, ಕಣ್ತಪ್ಪಿನಿಂದ ಆದ ವ್ಯತ್ಯಾಸವನ್ನು ಸರಿಪಡಿಸಲಾಗುವುದು, ಸದರಿ ಲೋಗೋವನ್ನು ಕೊಡವ ಪಾಲೆ ಜನಾಂಗ ಬಳಸಿಕೊಳ್ಳಲು ನಮ್ಮ ಸಮ್ಮತಿಯಿದ್ದು, ಈ ಕುರಿತು ಸಂಘಟನೆಯ ಪದಾಧಿಕಾರಿಗಳೊಂದಿಗೆ ಚರ್ಚಿಸಿ ದೃಡೀಕರಣ ನೀಡಲಾಗುವುದು ಎಂದು ಹಿಂಬರಹ ನೀಡಿದರು.

ಕೊಡವಾಮೆರ ಕೊಂಡಾಟ ಸಂಘಟನೆಯ ಆಡಳಿತ ಮಂಡಳಿ ನಿರ್ದೇಶಕ ಚಿರಿಯಪಂಡ ವಿಶುಕಾಳಪ್ಪ, ಕೊಡವ(ಅರಮನೆ) ಪಾಲೆ ಜನಾಂಗದ ಸಂಘಟಕರಾದ ಕೊಡವ ಪಾಲೆ ಮಂದಣ್ಣ, ಕೊಡವಪಾಲೆ ದೇವಯ್ಯಕಕ್ಕಬ್ಬೆ, ಕೊಡವಪಾಲೆ ಗಣೇಶ್ ಕುಂಜಿಲ, ಕೊಡವ ಪಾಲೆ ಮಧುದೇವಯ್ಯ ಕುಂಜಿಲ ಅವರುಗಳು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಬಲಮುರಿಯಲ್ಲಿ ಇಂದು ಕಾವೇರಿ ಜಾತ್ರಾ ಮಹೋತ್ಸವ: ಸಕಲ ಸಿದ್ಧತೆ ಪೂರ್ಣ; ವಿಶೇಷ ಪೂಜೆ, ಕಾವೇರಿ ಮಹಾ ಆರತಿ ಹಾಗೂ ಅನ್ನಸಂತರ್ಪಣೆ ಆಯೋಜನೆ

ಅಕ್ಟೋಬರ್ 18, 2026

ಕ್ಲೀನ್ ಕಕ್ಕಬ್ಬೆ ಅಭಿಯಾನ ಯಶಸ್ವಿ: 3,670 ಕೆ.ಜಿ. ತ್ಯಾಜ್ಯ ತೆರವು; ನಾಲಡಿ ಕಸಮುಕ್ತ; ಮರಂದೋಡು ಗ್ರಾಮವೂ ಬಹುತೇಕ ಸ್ವಚ್ಛ

ಅಕ್ಟೋಬರ್ 18, 2026

ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಠಿ: 118 ಕವಿಗಳ ಮಹಾಸಂಗಮ; ಜೆನ್-ಜಿ ಹಾಗೂ ಬಾಲಕವಿಗಳಿಂದ ಕವನ ವಾಚನ; ವಿವಿಧ ಭಾಷೆ, ಸಂಸ್ಕೃತಿಗಳ ಸಾಹಿತ್ಯ ಅಭಿವ್ಯಕ್ತಿಗೆ ವೇದಿಕೆ

ಅಕ್ಟೋಬರ್ 18, 2026

ಕ್ಲೀನ್ ಕಕ್ಕಬ್ಬೆ ಅಭಿಯಾನ ಯಶಸ್ವಿ: 3,670 ಕೆ.ಜಿ. ತ್ಯಾಜ್ಯ ತೆರವು; ನಾಲಡಿ ಕಸಮುಕ್ತ; ಮರಂದೋಡು ಗ್ರಾಮವೂ ಬಹುತೇಕ ಸ್ವಚ್ಛ

ಅಕ್ಟೋಬರ್ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ನಾಪೋಕ್ಲು, NEWS DESK ಅ.18: ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಹಸಿರುಸಿರಿಯ ನೆಲೆವೀಡಾದ ಕಕ್ಕಬ್ಬೆ ಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕ್ಲೀನ್…

ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಠಿ: 118 ಕವಿಗಳ ಮಹಾಸಂಗಮ; ಜೆನ್-ಜಿ ಹಾಗೂ ಬಾಲಕವಿಗಳಿಂದ ಕವನ ವಾಚನ; ವಿವಿಧ ಭಾಷೆ, ಸಂಸ್ಕೃತಿಗಳ ಸಾಹಿತ್ಯ ಅಭಿವ್ಯಕ್ತಿಗೆ ವೇದಿಕೆ

ಅಕ್ಟೋಬರ್ 18, 2026

ರಾಜ್ಯಮಟ್ಟದ ಯೋಗ ದಸರಾ ಸ್ಪರ್ಧೆಯಲ್ಲಿ ಸುಮೇಶ್ ಕೆ.ಪಿ.ಗೆ ದ್ವಿತೀಯ ಸ್ಥಾನ; ಪಾಲಿಬೆಟ್ಟದ ಚೆಶೈರ್ ಹೋಮ್ ವಿಶೇಷ ಶಾಲೆಯ ವಿದ್ಯಾರ್ಥಿಗೆ ಬೆಳ್ಳಿ ಪದಕ, ನಗದು ಬಹುಮಾನ

ಅಕ್ಟೋಬರ್ 18, 2026

ತಲಕಾವೇರಿಯಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ಪವಿತ್ರ ತೀರ್ಥೋದ್ಭವ

ಅಕ್ಟೋಬರ್ 17, 2026

ಮೂರ್ನಾಡಿನಲ್ಲಿ ಅ.20ರಂದು 33ನೇ ವರ್ಷದ ಅದ್ದೂರಿ ಆಯುಧ ಪೂಜೆ ಮಹೋತ್ಸವ; ವಾಹನಗಳ ಮೆರವಣಿಗೆ, ಬೊಂಬೆ ಕುಣಿತ ಆಕರ್ಷಣೆ; ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಹಾಗೂ ಮಾಜಿ ಸೈನಿಕರಿಗೆ ಸನ್ಮಾನ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ವಿರಾಜಪೇಟೆಯಲ್ಲಿ ಅ.20ರಂದು ಅದ್ದೂರಿ ಆಯುಧ ಪೂಜೆ: ಬೈಕ್ ಸಾಹಸ ಪ್ರದರ್ಶನ, ಸಂಗೀತ ರಸಮಂಜರಿ ವಿಶೇಷ ಆಕರ್ಷಣೆ

ಅಕ್ಟೋಬರ್ 17, 2026

ಭೀಕರ ರಸ್ತೆ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಅಕ್ಟೋಬರ್ 17, 2026

ಇಂದು ಮಡಿಕೇರಿಯಲ್ಲಿ ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.