ಮಡಿಕೇರಿ ಡಿ.9 : ಕೆ.ಎಂ.ಎಫ್. ಫ್ರೆಂಡ್ಸ್ ವತಿಯಿಂದ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಚಾಲನೆ ದೊರೆಯಿತು.
ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಜನಾರ್ಧನ್ ಪಂದ್ಯಾವಳಿಯನ್ನು ಉದ್ಘಾಟಿಸಿದರು.
ಈ ಸಂದರ್ಭ ಸಮಾಜದ ಮಾಜಿ ಅಧ್ಯಕ್ಷ ಹಾಗೂ ತುಳು ಸಾಹಿತ್ಯ ಅಕಾಡಮಿಯ ಸದಸ್ಯ ಪಿ.ಎಂ.ರವಿ, ಬಹುಮಾನ ದಾನಿ ರವಿ, ಶಕ್ತಿ ದಿನ ಪತ್ರಿಕೆಯ ಹಿರಿಯ ಉಪ ಸಂಪಾದಕ ಕುಡೇಕಲ್ ಸಂತೋಷ್, ಜಿಲ್ಲಾ ಸಮಿತಿ ಸದಸ್ಯರಾದ ಚಂದ್ರ, ಪೊಡಿಯ, ಸೋಮವಾರಪೇಟೆ ಪ.ಪಂ ಸದಸ್ಯ ಪಿ.ಕೆ.ಚಂದ್ರು ಹಾಜರಿದ್ದರು.
ಕ್ರೀಡಾ ಕೂಟದಲ್ಲಿ ಸಮಾಜದ ಮಹಿಳೆಯರ, ಆಯೋಜಕರು ಹಾಗೂ ಕೊಡಗು ಪತ್ರಕರ್ತರ ನಡುವೆ ಪ್ರದರ್ಶನ ಪಂದ್ಯ ನಡೆಯಿತು.
ಇಶಾನಿ. ಎಫ್. ಸಿ., ಗೋಣಿಕೊಪ್ಪ. ಜನನಿ. ಎಫ್, ಸಿ, ಮಡಿಕೇರಿ. ಮಾನ್ವಿಕ್. ಎಫ್. ಸಿ.ಅಮ್ಮತಿ, ಟೀಮ್ ಹಂಟರ್ಸ್ ಮರಗೋಡು, ಮೊಗೇರ ಎಫ್. ಸಿ, ಪಾಲಿಬೆಟ್ಟ, ಫಿಯೋನೆಕ್ಸ್ ಎಫ್. ಸಿ. ಸೋಮವಾರಪೇಟೆ, ಎ.ಎಂ. ಎಫ್. ಸಿದ್ದಾಪುರ, ಹಾಗೂ ಭಗವತಿ, ಎಫ್. ಸಿ, ಹಾಲುಗುಂದ, ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ.
ಪಂದ್ಯಾವಳಿಯಲ್ಲಿ ವಿಜೇತವಾಗುವ ತಂಡಕ್ಕೆ 25 ಸಾವಿರ ನಗದು ಹಾಗೂ ಆಕರ್ಷಕ ಟ್ರೊಫಿ, ರನ್ನರ್ಸ್ ತಂಡಕ್ಕೆ 15 ಸಾವಿರ ನಗದು ಹಾಗೂ ಆಕರ್ಷಕ ಟ್ರೊಫಿ ಸೇರಿದಂತೆ ವೈಯಕ್ತಿಕ ಟ್ರೊಫಿಗಳು ನೀಡಲಾಗುವುದು ಎಂದು ಆಯೋಜಕರಾದ ರಮೇಶ್, ಟಿ.ದಿನೇಶ್, ದರ್ಶಿತ್ ಹೆಬ್ಬಟ್ಟಗೇರಿ, ವಿವೇಕ್ ಮೊಗೇರ ಹಾಗೂ ಗುರುಕುಲ ಕಲಾಮ0ಡಳಿಯ ದಿನೇಶ್ ತಿಳಿಸಿದ್ದಾರೆ.