ಮಡಿಕೇರಿ ಡಿ.11 : ಗೋಣಿಕೊಪ್ಪಲಿನ ಸಂಪೂರ್ಣ ಸ್ವಾಸ್ಥ್ಯ ಯೋಗ ಕೇಂದ್ರದ ವತಿಯಿಂದ ಸ್ವಾಮಿ ವಿವೇಕಾನಂದರ 162ನೇ ಜನ್ಮದಿನಾಚರಣೆ ಪ್ರಯುಕ್ತ ಜ.14 ರಂದು ಸಾರ್ವಜನಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಯೋಗಾಸನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕೆ.ಕೆ.ಸೋಮಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಕೊಡಗಿನಲ್ಲಿ ಪ್ರಥಮ ಬಾರಿಗೆ ಸೂರ್ಯ ನಮಸ್ಕಾರ ಚಾಲೆಂಜ್ ಸ್ಪರ್ಧೆಯನ್ನು ಏರ್ಪಡಿಸಿ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಈ ಬಾರಿಯೂ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಯೋಗದಿಂದ ನಿರೋಗದ ಕಡೆ ಸಾಗುವ, ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಯೋಗದ ಮಹತ್ವ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಗೋಣಿಕೊಪ್ಪಲಿನ ಕೈಕೇರಿ ಗ್ರಾಮದ ಭಗವತಿ ದೇವಾಲಯದ ಆವರಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಎಂದರು.
ಸ್ಪರ್ಧೆಯು ಸೀನಿಯರ್, ಜೂನಿಯರ್ ಮತ್ತು ಸಾರ್ವಜನಿಕ ಎಂಬ ಮೂರು ವಿಭಾಗಗಳಲ್ಲಿ ನಡೆಯಲಿದ್ದು, ಪ್ರಥಮ ವಿಜೇತರಿಗೆ ರೂ.15 ಸಾವಿರ ನಗದು, ದ್ವಿತೀಯ ರೂ.10 ಸಾವಿರ ನಗದು ಹಾಗೂ ತೃತೀಯ ವಿಜೇತರಿಗೆ ರೂ.5 ಸಾವಿರ ನಗದು ಬಹುಮಾನ ಸೇರಿದಂತೆ ಟ್ರೋಫಿ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುವುದೆಂದು ಕೆ.ಕೆ.ಸೋಮಯ್ಯ ತಿಳಿಸಿದರು.
ವೈಯಕ್ತಿಕ ಆಸನಗಳ ಸ್ಪರ್ಧೆ ವಯೋಮಿತಿಗಳಿಗಾನುಸಾರವಾಗಿ ಹಾಗೂ ಬಾಲಕ, ಬಾಲಕಿಯರಿಗೆ ಪ್ರತ್ಯೇಕವಾಗಿ ನಡೆಯಲಿದ್ದು, ವಿಜೇತರಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗವುದು. ನೋಂದಾವಣೆಗೆ ಡಿ.25 ಕೊನೆಯ ದಿನವಾಗಿದ್ದು, ನಂತರ ಬಂದ ತಂಡಗಳಿಗಳನ್ನು ಪರಿಗಣಿಸಲಾಗವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ಸ್ಪರ್ಧಾ ನಿಯಮ ಮತ್ತು ನೋಂದಾವಣೆಗಾಗಿ 7009865119 ಅಥವಾ ಗೋಣಿಕೊಪ್ಪದ ಪಂಚಾಯತ್ ವಾಣಿಜ್ಯ ಮಳಿಗೆ ಸಮೀಪ ಇರುವ ಕೇಂದ್ರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಸದಸ್ಯರಾದ ಅಚ್ಪಾಡಿ ತಿಮ್ಮಯ್ಯ, ಚರಣ್ ಕುಲಾಲ್, ಬಿ.ಕೆ.ರಾಜು ಹಾಗೂ ಎಂ.ಎಂ.ಚರಣ್ ಉಪಸ್ಥಿತರಿದ್ದರು.
Breaking News
- *ಭಾಗಮಂಡಲ ಫ್ಲೈ ಓವರ್ – ಫ್ಲಾಶ್ ಬ್ಯಾಕ್*
- *ಅರ್ಚಕರ ಮೇಲೆ ನಡೆದ ಹಲ್ಲೆ ಪ್ರಕರಣ : ಸಹಕರಿಸಿದ ಆರೋಪಿಗಳು ಹಾಗೂ ವಾಹನಗಳು ವಶ : ಆರೋಪಿಗಳಿಗೆ ಸಹಾಯ ಮಾಡುತ್ತಿರುವವರ ಕುರಿತು ಮಾಹಿತಿ ಒದಗಿಸಲು ಎಸ್ಪಿ ಮನವಿ*
- *ಮುಖ್ಯಮಂತ್ರಿಗಳಿಗೆ ಕೊಡಗು ಎಸ್ಡಿಪಿಐಯಿಂದ ಪಂಚ ಪ್ರಶ್ನೆ*
- *ಜೀವ ಬೆದರಿಕೆ ಇದೆ ಎಂದು ಆರೋಪಿಸಿ ದೂರು ನೀಡಿದ ಎನ್.ಯು.ನಾಚಪ್ಪ*
- *ಮಡಿಕೇರಿಯಲ್ಲಿ ಹುತಾತ್ಮ ದಿನಾಚರಣೆ : ಗಾಂಧೀಜಿ ತತ್ವ, ಆದರ್ಶ ಮೈಗೂಡಿಸಿಕೊಳ್ಳಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ ಕರೆ*
- *ಕೊಡಗು : ಫೆ.13 ರವರೆಗೆ “ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ”*
- *ಒಳಮೀಸಲಾತಿ ಶೀಘ್ರ ಜಾರಿಗೆ ತರಲು ದಲಿತ ಸಂಘರ್ಷ ಸಮಿತಿ ಆಗ್ರಹ*
- *ಮೂರ್ನಾಡು ಗಜಾನನ ಯುವಕ ಸಂಘ ಖಂಡನೆ*
- *ಅಮಾಯಕರ ಮೇಲಿನ ಹಲ್ಲೆ ಖಂಡನೀಯ : ಮೂರ್ನಾಡು ಆಪ್ತಮಿತ್ರ ಬಳಗ ಅಸಮಾಧಾನ*
- *ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದಿಂದ ಸಂಭ್ರಮದ ಪುತ್ತರಿ ಒತ್ತೋರ್ಮೆ ಕೂಟ*