ಮಡಿಕೇರಿ ಡಿ.12 : ಮಂಗಳೂರಿನ ಕುದ್ರೋಳಿ ಯ ಶ್ರೀ ಕೊರಗಪ್ಪ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಸುಂಟಿಕೊಪ್ಪದ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಉತ್ತಮ ಸಾಧನೆ ಮಾಡಿದ್ದಾರೆ.
14 ವರ್ಷದ ಬಾಲಕಿಯರ ವಿಭಾಗದ ಕಟಾ ವಿಭಾಗದಲ್ಲಿ ಹರಿಪ್ರಿಯಾ ದ್ವಿತೀಯ ಹಾಗೂ ಕುಮಿತೆ ವಿಭಾಗದಲ್ಲಿ ದ್ವಿತೀಯ, 14 ವರ್ಷದ ಕಟಾ ವಿಭಾಗದಲ್ಲಿ ಸಾನಿಕ ಪ್ರಥಮ, 13 ವರ್ಷದ ಕಟಾ ಹಾಗೂ ಕುಮಿತೆವಿಭಾಗದಲ್ಲಿ ದಿಗಂತ್ ದ್ವಿತೀಯ, ವಿಷ್ಣು 11 ವರ್ಷದ ಕಟಾ ವಿಭಾಗದಲ್ಲಿ ಪ್ರಥಮ ಹಾಗೂ ಕುಮಿತೆ ವಿಭಾಗದಲ್ಲಿ ದ್ವಿತೀಯ, ಸ್ಥಳೀಯ ಶಾಂತಿ ನಿಕೇತನ ಶಾಲೆಯ ಮನ್ವಿತ್ ಕಥಾ ವಿಭಾಗದಲ್ಲಿ ತೃತೀಯ ಸ್ಥಾನ, ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಹಾಗೂ ಕುಮಿತೆ ವಿ ಭಾಗದಲ್ಲಿ ಅಕ್ಷಯ್ ದ್ವಿತೀಯ, ಕಟಾ ವಿಭಾಗದಲ್ಲಿ ತೃತೀಯ, ಅಂಕಿತ್ ಕಟಾ ಹಾಗೂ ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇವರು ತರಬೇತುದಾರ ಬಿ.ಎಂ.ಮುಖೇಶ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.