ಮಡಿಕೇರಿ ಡಿ.12 : ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವತಿಯಿಂದ ಕುಶಾಲನಗರ ತಾಲ್ಲೂಕು ಇಲ್ಲಿ ರಾಷ್ಟ್ರೀಯ ಹೆದ್ದಾರಿ-275 ವಿಭಾಗದ ಮೈಸೂರು-ಮಂಗಳೂರು ಇಕನಾಮಿಕಲ್ ಕಾರಿಡಾರ್ ರಸ್ತೆಯನ್ನು 2 ಲೇನ್‍ಗಳಿಂದ 4/6 ಲೇನ್‍ಗಾಗಿ ಅಗಲೀಕರಣ ಮತ್ತು ಉನ್ನತ್ತೀಕರಣದ ಯೋಜನೆಗೆ ಕೊಡಗು ಜಿಲ್ಲೆಗೆ ಸಂಬಂಧಪಟ್ಟಂತೆ ಪರಿಸರ ವಿಮೋಚನಾ ಪತ್ರ ಪಡೆಯುವ ಸಲುವಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಸಮುದಾಯ ಭವನದಲ್ಲಿ ಡಿ.13 ರಂದು ಬೆಳಗ್ಗೆ 11 ಗಂಟೆಗೆ ‘ಸಾರ್ವಜನಿಕ ಸಭೆ’ ನಡೆಯಲಿದೆ ಎಂದು ಕೊಡಗು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ರಘುರಾಮ್ ತಿಳಿಸಿದ್ದಾರೆ.









