ಮಡಿಕೇರಿ ಡಿ.13 : ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘದ ಸದಸ್ಯರ ಹಿತರಕ್ಷಾ ಸಮಿತಿ ಮನವಿಯ ಮೇರೆಗೆ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘದ ಸಮಾಪನ ಆದೇಶವನ್ನು ರದ್ದುಪಡಿಸಿ, ಆಡಳಿತ ಅಧಿಕಾರಿಯವರನ್ನ ನೇಮಕ ಮಾಡಿ ಸಮಿತಿಗೆ ಕೂಡಲೇ ಸಂಘವನ್ನು ರೈತರಿಗೆ ವಾಪಸ್ಸು ನೀಡುವಂತೆ ಒತ್ತಾಯಿಸಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಸಹಕಾರಿ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಡನೆ ಬೆಳಗಾವಿ ಸುವರ್ಣ ಸೌಧದಲ್ಲಿ ಸಭೆ ನಡೆಸಿದರು.
ಮನವಿಗೆ ತ್ವರಿತವಾಗಿ ಸ್ಪಂದಿಸಿ ಸಂಘವನ್ನು ಪುನಶ್ಚೇತನಗೊಳಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಎ.ಎಸ್. ಪೊನ್ನಣ್ಣ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಸಂಘ ಕಾಫಿ ಬೆಳೆಗಾರರ ಪರವಾಗಿ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದೆ.