ಮಡಿಕೇರಿ ಡಿ.14 : ಆರ್ಥಿಕವಾಗಿ ತೀರಾ ಹಿಂದುಳಿದಿರುವ ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬ್ಯಾರೀಸ್ ವೆಲ್ಫೇರ್ ಫೋರಂ (ಬಿ.ಡಬ್ಲ್ಯು.ಎಫ್.), ಅಬುಧಾಬಿ-2024ರ ಫೆ.17 ರಂದು ಮಂಗಳೂರಿನ ಗಂಜಿಮಠದಲ್ಲಿರುವ ‘ಝಾರಾ ಕನ್ವೆಂಶನ್ ಸೆಂಟರ್’ನಲ್ಲಿ ತನ್ನ ಎಂಟನೇ ‘ಸರಳ ಸಾಮೂಹಿಕ ವಿವಾಹ’ ಸಮಾರಂಭವನ್ನು ಹಮ್ಮಿಕೊಂಡಿದ್ದು, ಆಸಕ್ತ ವಧುವಿನ ಕುಟುಂಬಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವಾಸವಾಗಿರುವ ವಧುವಿನ ಕುಟುಂಬಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಆಯ್ದ ವಧುವಿಗೆ ಮದುವೆಯ ವಸ್ತ್ರ, ನಾಲ್ಕು ಪವನ್ ಚಿನ್ನಾಭರಣ ಹಾಗೂ ಮದುವೆಯ ಖರ್ಚನ್ನು ಬ್ಯಾರೀಸ್ ವೆಲ್ಫೇರ್ ಫೋರಂ ಭರಿಸಲಿದೆ. ಅನಾಥ, ಅಂಗವಿಕಲ, ಆರ್ಥಿಕ ಸಂಕಷ್ಟ ಹಾಗೂ ಮದುವೆಯ ವಯಸ್ಸು ಮೀರಿರುವ ವಧುವಿಗೆ ಆಧ್ಯತೆ ನೀಡಲಾಗುವುದು ಎಂದರು.
ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನಾಂಕವಾಗಿದ್ದು, ಆಸಕ್ತರು ನಿಗದಿತ ಅರ್ಜಿ ನಮೂನೆ ಪಡೆಯಲು ಯು.ಹೆಚ್. ಉಮರ್ ಸಂಚಾಲಕರು, ಬಿ.ಡಬ್ಲ್ಯು.ಎಫ್. ಸಾಮೂಹಿಕ ವಿವಾಹ ಸಂಘಟನಾ ಸಮಿತಿ, ಎಲ್ಎಕ್ಸ್ಎಂ ಸೀ ಫುಡ್ ಎಕ್ಸ್ಪೋರ್ಟ್ಸ್, ನಂ. 14, ಒಂದನೇ ಮಹಡಿ, ಅಡೋನೈ ಟವರ್ಸ್, ಕಂಕನಾಡಿ ರಸ್ತೆ, ಹೈಲ್ಯಾಂಡ್ ಆಸ್ಪತ್ರೆ ಬಳಿ, ಮಂಗಳೂರು – 575002, ದೂರವಾಣಿ ಸಂ. 9845054191, ಕೊಡಗಿನವರು ಪಿ.ಕೆ ಅಬ್ದುಲ್ ರೆಹಮಾನ್ ವಿರಾಜಪೇಟೆ- 94499 82727 ಹಾಗೂ ಎಂ.ಎಂ ಅಬ್ದುಲ್ಲಾ ಮಡಿಕೇರಿ 9886521136 ಸಂಪರ್ಕಿಸ ಬಹುದಾಗಿದೆ ಎಂದು ಮುಹಮ್ಮದ್ ಅಲಿ ಉಚ್ಚಿಲ್ ತಿಳಿಸಿದ್ದಾರೆ.