ಮಡಿಕೇರಿ ಡಿ.15 : ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿರುವ ಕೊಡಗಿನ ಕರ್ನಲ್ ಮಂಡೆಪಂಡ ಸ್ಮಿತಾ ಅಯ್ಯಪ್ಪ (ತವರುಮನೆ ಮೇವಡ) ಅವರು ಕಮಾಂಡಿಂಗ್ ಅಧಿಕಾರಿಯಾಗಿ ಬಡ್ತಿ ಪಡೆದಿದ್ದಾರೆ.
ಜಮ್ಮು ಕಾಶ್ಮೀರದ ರಜೋರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು 356 ಎ.ಸಿ. ಬೆಟಾಲಿಯನ್‌ನ ಕಮಾಂಡಿಂಗ್ ಅಧಿಕಾರಿಯಾಗಿ ಡಿ.12 ರಂದು ನಿಯೋಜನೆ ಗೊಂಡಿದ್ದಾರೆ. ಇವರು ಕರ್ನಲ್ ಅಯ್ಯಪ್ಪ ಅವರ ಪತ್ನಿ.








