ವಿರಾಜಪೇಟೆ ಡಿ.15 : ಕುಂದಾ ಮನೆಯಪಂಡ ಕುಟುಂಬದ ಆಶ್ರಯದಲ್ಲಿ ಮನೆಯಪಂಡ ಐನ್‍ಮನೆ ಸಮೀಪದಲ್ಲಿರುವ ಮುದರೆ ಪಾಲ ಮೈದಾನದಲ್ಲಿ ಮನೆಯಪಂಡ ಕುಟುಂಬದ ಪುತ್ತರಿ ಒತ್ತೋರ್ಮೆ ಕೂಟ ನಡೆಯಿತು.
ನಿವೃತ್ತ ಎಸ್.ಪಿ ಮುಕ್ಕಾಟ್ಟಿರ ಅಪ್ಪಯ್ಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕುಟುಂಬದ ಅಧ್ಯಕ್ಷ ಮನೆಯಪಂಡ ರಾಜ ಸೋಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಆಚಾರ, ವಿಚಾರ, ಪದ್ಧತಿ, ಪರಂಪರೆ ಉಳಿಸಿ ಬೆಳೆಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು. ನಮ್ಮ ಎಲ್ಲ ಕುಟುಂಬದವರು ಐನ್‍ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳು, ಗುರು ಕಾರೋಣ, ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ಪಟ್ಟೆದಾರ ಮನೆಯಪಂಡ ಸಿದ್ದು ನಾಚಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭ ಐನ್‍ಮನೆ, ಗುರುಮಠ, ಗಣಪತಿ ಗುಡಿಯಲ್ಲಿ ಪ್ರತಿದಿನ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಂಡು ಬರುತ್ತಿರುವ ಮನೆಯಪಂಡ ಬೊಳ್ಳು ಬೆಳ್ಳಿಯಪ್ಪ, ಅವರ ಪತ್ನಿ ಮಧು ಬೆಳ್ಳಿಯಪ್ಪ, ಮಕ್ಕಳಾದ ಆಧಿತ್ಯ ಅಯ್ಯಣ್ಣ, ಆದರ್ಶ ಕುಟ್ಟಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸಾಂಪ್ರಾದಾಯಿಕ ಪೀಚೆಕತ್ತಿ ನೀಡಿ ಗೌರವಿಸಲಾಯಿತು. ಅಲ್ಲದೇ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಮೇಜರ್ ಮನೆಯಪಂಡ ಬೋಪಣ್ಣ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು.
ಕುಟುಂಬದ ಕಾರ್ಯದರ್ಶಿ ಮನೆಯಪಂಡ ನಾಚಪ್ಪ ಸೇರಿದಂತೆ ಆಡಳಿತ ಮಂಡಳಿರ ಸದಸ್ಯರುಗಳಾದ ಮನೆಯಪಂಡ ಧೀರಜ್, ಮನೆಯಪಂಡ ಪೂವಯ್ಯ, ಮನೆಯಪಂಡ ಬೋಪಣ್ಣ, ಮನೆಯಪಂಡ ಧನ್ಯ, ಮಂಜು, ಪ್ರಜ್ವಲ್, ಮೊಣ್ಣಪ್ಪ, ರಮೇಶ್ ಸೇರಿದಂತೆ ಇತರರು ಹಾಜರಿದ್ದರು.
ಮನೆಯಪಂಡ ದೇವಿಕಾ ಪೂವಯ್ಯ ಪ್ರಾರ್ಥಿಸಿದರು, ಮನೆಯಪಂಡ ಧೀರಜ್ ಮಾಚಯ್ಯ ಸ್ವಾಗತಿಸಿದರು, ಮನೆಯಪಂಡ ಮೇಜರ್ ಬೋಪಣ್ಣ ಅವರ ಸೇವೆಯ ಸಾಧನೆಯ ಪರಿಚಯ ಮಾಡಿದರು. ಬೊಳ್ಳು ಬೆಳ್ಳಿಯಪ್ಪ ಅವರ ಪರಿಚಯವನ್ನು ಮನೆಯಪಂಡ ಪತ್ರಿಕಾ ಮೊಣ್ಣಪ್ಪ ಮಾಡಿದರು. ಮನೆಯಪಂಡ ಶೀಲಾ ಬೋಪಣ್ಣ ವಂದಿಸಿದರು.
ಮನೆಯಪಂಡ ಕಾಂತಿ ಸತೀಶ್, ಮನೆಯಪಂಡ ಅಂಜು ಸಚಿನ್, ಮನೆಯಪಂಡ ನಿಶಾ ಮಾಚಯ್ಯ, ಮನೆಯಪಂಡ ಪತ್ರಿಕಾ ಮೊಣ್ಣಪ್ಪ, ಮನೆಯಪಂಡ ಅಕ್ಕಮ್ ಬೋಪಣ್ಣ ಕಾರ್ಯಕ್ರಮ ನಿರ್ವಹಿಸಿದರು.
ಪುತ್ತರಿ ಹಬ್ಬದ ಒತ್ತೊರ್ಮೆ ಕೂಟದ ಪ್ರಯುಕ್ತ ವಿವಿಧ ಆಟೋಟ, ಹಾಡು ನೃತ್ಯ ಸ್ಪರ್ಧೆಗಳು ನಡೆದವು. ಇದೇ ಸಂದರ್ಭ ವಿಜೇತರಿಗೆ ಬಹುಮನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮನೆಯಪಂಡ ಕುಟುಂಬಸ್ಥರು, ತವರು ಮನೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.









