ಮಡಿಕೇರಿ ಡಿ.15 : ಗ್ರಾಮೀಣ ಹೋಂ-ಸ್ಟೇಗಳನ್ನು ಉತ್ತೇಜಿಸುವ ಸಲುವಾಗಿ ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು ಗ್ರಾಮೀಣ ಹೋಂ-ಸ್ಟೇಗಳ ಪ್ರಚಾರಕ್ಕಾಗಿ ರಾಷ್ಟ್ರೀಯ ಕಾರ್ಯತಂತ್ರವನ್ನು ಪ್ರಾರಂಭಿಸಿದ್ದು, ಇದರ ಪರ್ಯಾಯ ರೂಪವಾಗಿ ಗ್ರಾಮೀಣ ಹೋಂ-ಸ್ಟೇಗಳ ಪ್ರಚಾರ, ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಕೇಂದ್ರೀಯ ನೋಡಲ್ ಏಜೆನ್ಸಿ ಮೂಲಕ ಪ್ರವಾಸೋದ್ಯಮ ಸಚಿವಾಲಯವು ಅತ್ಯುತ್ತಮ ಗ್ರಾಮೀಣ ಹೋಂ ಸ್ಟೇ ಸ್ಪರ್ಧೆ-2024 ನ್ನು ನಡೆಸುತ್ತಿದ್ದು, ಅತ್ಯುತ್ತಮ ಗ್ರಾಮೀಣ ಹೋಂ ಸ್ಟೇ ಸ್ಪರ್ಧೆಗೆ ವಿಭಾಗಗಳನ್ನು ಗುರುತಿಸಲಾಗಿದೆ.
ರೋಮಾಂಚಕ ಗ್ರಾಮ, ಹಸಿರು, ಸಮುದಾಯ ಚಾಲಿತ, ಮಹಿಳಾ ನೇತೃತ್ವ ಘಟಕ, ಪರಂಪರೆ ಮತ್ತು ಸಂಸ್ಕೃತಿ ಫಾರ್ಮ್ ಸ್ಟೇ, ಕಾಟೇಜ್, ಆಯುರ್ವೇದ ಮತ್ತು ಸ್ವಾಸ್ಥ್ಯ, ದೇಶೀಯ ವಾಸ್ತುಶಿಲ್ಪ, ಎಲ್ಲವನ್ನು ಒಳಗೊಂಡ ಅಭ್ಯಾಸಗಳು, ಕ್ಲಸ್ಟರ್, ಜವಾಬ್ದಾರಿಯುತ ಅಭ್ಯಾಸಗಳು, ಟ್ರೀ ಹೌಸ್, ವಿಲಾ ಈ ವಿಭಾಗಗಳಡಿಯಲ್ಲಿ ನಾಮ ನಿರ್ದೇಶನವನ್ನು ಹೋಂ-ಸ್ಟೇ ಮಾಲೀಕರು ಭರ್ತಿ ಮಾಡಿ ಅರ್ಜಿಯನ್ನು ವೆಬ್‍ಸೈಟ್ https://www.rural.tourism.gov.in ಮುಖಾಂತರ ಸಲ್ಲಿಸಬಹುದು. ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಂ-ಸ್ಟೇಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಕೋರಿದ್ದಾರೆ.









