ಮಡಿಕೇರಿ ಡಿ.15 : ಹಿರಿಯ ನಾಗರಿಕರ ವೇದಿಕೆಯ ಮಹಾಸಭೆಯು ಡಿ.23 ರಂದು ಬೆಳಗ್ಗೆ 11 ಗಂಟೆಗೆ ನಗರದ ಬಾಲಭವನದಲ್ಲಿ ನಡೆಯಲಿದೆ.
ಸಭೆಯಲ್ಲಿ ಹಿರಿಯರ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿದ ಮಾರಮಡ ಮಾಚಮ್ಮ ಅವರನ್ನು ಸನ್ಮಾನಿಸಲಾಗುತ್ತದೆ. ಡಾ.ಎಚ್.ಆರ್.ಸರಸ್ವತಿ ಅವರು ಆಯುರ್ವೇದ ಔಷಧಿ ಹಾಗೂ ಚಿಕಿತ್ಸೆ ಹಿರಿಯರಿಗೆ ಹೇಗೆ ಪರಿಣಾಮಕಾರಿಯಾಗಬಲ್ಲದು ಎಂಬುದನ್ನು ತಿಳಿಸಲಿದ್ದಾರೆ ಎಂದು ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ತಿಮ್ಮಯ್ಯ ತಿಳಿಸಿದ್ದಾರೆ.









