ಕಡಂಗ ಡಿ.15 : ಅರಪಟ್ಟು ಶ್ರೀ ಉಮಾ ಮಹೇಶ್ವರಿ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.
ಗ್ರಾಮದ ದೇವಸ್ಥಾನದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಊರಿನ ಭಕ್ತರು ದೇವಾಲಯದ ಸುತ್ತಲೂ ಹಣತೆಯನ್ನಿರಿಸಿ ದೀಪ ಹಚ್ಚಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪೂಜೆಯ ಅಂಗವಾಗಿ ಸಾಮೂಹಿಕ ರುದ್ರಾಭಿಷೇಕ, ಮಹಾಪೂಜೆ ನಡೆಯಿತು.
ಪೂಜಾ ಕೈಂಕಾರ್ಯವನ್ನು ಅರ್ಚಕರಾದ ಕೀರ್ತಿಶ್ ಹಾಗೂ ಅಖಿಲೇಶ್ ಸಹೋದರರು ನಡೆಸಿಕೊಟ್ಟರು.
ದೇವಸ್ಥಾನ ಸಮಿತಿ ಅಧ್ಯಕ್ಷ ನೆರಪಂಡ ಚಿತ್ರ ಬೆಳ್ಳಿಯಪ್ಪ ಹಾಗೂ ಪದಾಧಿಕಾರಿಗಳು ಹಾಜರಿದ್ದರು. ನೆರೆದಿದ್ದ ಭಕ್ತಾದಿಗಳಿಗೆ ಕೋಡಿರ ಪಿ.ಅಪ್ಪಣ್ಣ ಹಾಗೂ ಸಂಸಾರ ಇವರ ಸೇವಾರ್ಥವಾಗಿ ಅನ್ನ ಸಂತರ್ಪಣೆ ನಡೆಯಿತು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ : ನೌಫಲ್










