ಮಡಿಕೇರಿ ಡಿ.15 : ಮಡಿಕೇರಿ ಎಂಎಸ್‍ಎಂಇ (ಮಿನಿಸ್ಟ್ರಿ ಆಫ್ ಮೈಕ್ರೋ, ಸ್ಮಾಲ್ ಅಂಡ್ ಮೀಡಿಯಂ ಎಂಟರ್ ಪ್ರೈಸಸ್) ವತಿಯಿಂದ 6 ವಾರಗಳ ಉಚಿತ “ಹೊಲಿಗೆ” ತರಬೇತಿ ಕಾರ್ಯಕ್ರಮವು “ಶ್ರೀ ಸದ್ಗುರು ವಿದ್ಯಾಸಂಸ್ಥೆ”ಯಲ್ಲಿ ನಡೆಯಿತು.
ಮಂಗಳೂರು ಎಂಎಸ್‍ಎಂಇನ ಸಹಾಯಕ ನಿರ್ದೇಶಕರಾದ ಸುಮನ್ ಎಸ್.ರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅಥಿತಿಗಳಾಗಿ ಹರೀಶ್, ಗಂಗಾದರ್ ನಾಯಕ್, ಲೀಡ್ ಬ್ಯಾಂಕ್ ಮ್ಯಾನೆಜರ್ ಹಾಜರಿದ್ದರು.
“ಸದ್ಗುರು ವಿದ್ಯಾಸಂಸ್ಥೆ” ಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಎಸ್.ಎಂ.ಇ ಯ ಅಸಿಸ್ಟೆಂಟ್ ಡೈರೆಕ್ಟರ್ ರವರಾದ ಸುಮನ್ ರಾಜ್ ಹಾಗೂ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಡಿ.ಎಸ್.ಡಿ.ಓ ಉಮಾ ಪಾಲ್ಗೊಂಡು ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.










