ಸುಂಟಿಕೊಪ್ಪ,ಡಿ.16 : ಕ್ರಿಸ್‍ಮಸ್ ಹಬ್ಬದ ಅಂಗವಾಗಿ ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ವತಿಯಿಂದ ಧರ್ಮಗುರು, ಸಂತ ಕ್ಲಾರ ಕಾನ್ವೆಂಟಿನ ಕನ್ಯಾಸ್ತೀಯರು, ಸಂತ ಕ್ಲಾಸ್ ವೇಷಧಾರಿ, ಯುವಕ ಯುವತಿಯರು ಕ್ಯಾರೋಲ್ಸ್ ವೃಂದದವರು ಕ್ರೈಸ್ತರ ಮನೆಗಳಿಗೆ ತೆರಳಿ ಪ್ರಾರ್ಥನೆ ಗಾಯನಗಳನ್ನು ಹಾಡುತ್ತಾ ಕ್ರಿಸ್ತ ಜಯಂತಿ ಶುಭ ಸಂದೇಶವನ್ನು ಸಾರಿದರದು.
ಕ್ರೈಸ್ತ ಭಾಂದವರು ಡಿಸೆಂಬರ್ ಮಾಸದಲ್ಲಿ ಮನೆಗಳಿಗೆ ಸುಣ್ಣ ಬಣ್ಣ ಬಳಿದು ವಿವಿಧ ಬಗೆಯ ನಕ್ಷತ್ರಗಳನ್ನು ಮನೆಯ ಮೇಲ್ಚಾವಣಿಗಳ ಮೇಲೆ ಅಳವಡಿಸುವುದು. ಮನೆಗಳಲ್ಲಿ ಕ್ರಿಸ್ತನ ಜನನದ ಸ್ಥಳವಾದ ಗೋದಾಲಿ (ದನದಕೊಟ್ಟಿಗೆ) ನಿರ್ಮಾಣವಾದರೆ, ಮಹಿಳೆಯರು ವಿವಿಧ ಬಗೆ ಬಗೆಯ ತಿಂಡಿ ಖಾದ್ಯಗಳನ್ನು ತಯಾರಿಸುವ ಸಡಗರ ಸಂಭ್ರಮಕ್ಕೆ ಅಣಿಯಾಗುತ್ತಿರುವಂತೆಯೇ ಸಾಂತಕ್ಲಾಸ್ ಅವರನ್ನು ಒಳಗೊಂಡ ಕ್ಯಾರೋಲ್ಸ್ ತಂಡವು ಆಗಮಿಸಿ ಮನೆಗಳಿಗೆ ಆರ್ಶಿವಚನ ನೀಡಿ ಮನೆಯ ಮಂದಿಗೆ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದೇ ಈ ಹಬ್ಬದ ವಿಶೇಷತೆಯಾಗಿದೆ.
ವಿಶ್ವದಾದ್ಯಂತ 2023 ರ ಕ್ರಿಸ್ತರ ಜನನದ ಹಬ್ಬವನ್ನು ಸಡಗರ ಸಂಭ್ರಮದಲ್ಲಿ ಆಚರಿಸಲು ಅಣಿಗೊಳ್ಳುತ್ತಿದೆ. ಅದೇ ರೀತಿಯ ಸುಂಟಿಕೊಪ್ಪ ದೇವಾಲಯದಲ್ಲಿಯೂ ಕ್ರೈಸ್ತ ಧರ್ಮಗರುಗಳು, ಕ್ರೈಸ್ತ ದೇವಾಲಯ ಕ್ರೈಸ್ತ ಬಾಂಧವರು ಭರದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ದೇವಾಲಯದಲ್ಲಿ ಕ್ರಿಸ್ತರು ಜನಿಸಿದ ದಿನವನ್ನು ಕ್ರೈಸ್ತ ಬಾಂಧವರ ಮನೆಗಳಲ್ಲಿ ವಿವಿಧ ಬಣ್ಣ ಬಣ್ಣದ ನಕ್ಷತ್ರಗಳ ಮಿನುಗು ಕ್ರಿಸ್ತರು ಜನಿಸಿದ ಸ್ಥಳ ದನದಕೊಟ್ಟಿಗೆ ನಿರ್ಮಾಣದೊಂದಿಗೆ ದೇವಾಲಯ ಅಲಂಕಾರಗೊಳಿಸಲು ಸಜ್ಜಾಗುತ್ತಿದ್ದಾರೆ.
Breaking News
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಪಮಾನ : ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಜಿಲ್ಲಾ ಬಿಜೆಪಿಯಿಂದ ಎಸ್ಪಿಗೆ ದೂರು*
- *ಮಡಿಕೇರಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ*
- *ಜಿಲ್ಲಾ ಮಟ್ಟದ ಯುವಜನೋತ್ಸವ : ಹೆಸರು ನೋಂದಾಯಿಸಿಕೊಳ್ಳಲು ನ.28 ಕೊನೆ ದಿನ*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ನ.24 ರಂದು ಕೊಡಗು ಜಿಲ್ಲಾ ಕಿವುಡರ ಸಂಘದ ಸಭೆ*
- *ಕುಶಾಲನಗರದಲ್ಲಿ ಅಕ್ಷರ ಜ್ಯೋತಿ ಯಾತ್ರೆಗೆ ಸ್ವಾಗತ : ಉತ್ತಮ ಸಂಸ್ಕಾರ, ಸದ್ಗುಣ ಬೆಳೆಸಿಕೊಳ್ಳಲು ಬಸವಕುಮಾರ್ ಪಾಟೀಲ್ ಕರೆ*
- *ನ.29 ರಂದು ಮೂರ್ನಾಡುವಿನಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ*