ಮಡಿಕೇರಿ ಡಿ.16 : ಧನ್ಯಶ್ರೀ ನೃತ್ಯ ಕಲಾನಿಕೇತನ ವತಿಯಿಂದ ಭರತನಾಟ್ಯ ಕಲಾವಿದೆ ಪ್ರೇಕ್ಷ ಭಟ್ ಅವರ “ಭರತನಾಟ್ಯ ರಂಗಪ್ರವೇಶ” ಕಾರ್ಯಕ್ರಮ ನಡೆಯಿತು.
ಮಡಿಕೇರಿಯ ಶ್ರೀಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದ ಶತಮಾನೋತ್ಸವ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಹಾಸನದ “ನಾಟ್ಯಶ್ರೀ” ಭಾರತೀಯ ಸಂಗೀತ ನೃತ್ಯ ಕಲಾ ಶಾಲೆಯ ವಿದುಷಿ ಕೆ.ಎಸ್.ಅಂಬಳೆ ರಾಜೇಶ್ವರಿ ಹಾಗೂ ಪೊನ್ನಂಪೇಟೆ ನಿನಾದ ವಿದ್ಯಾಸಂಸ್ಥೆಯ ಚೇಂದಿರ ನಿರ್ಮಲ ಬೋಪಣ್ಣ ಅವರು ಭರತನಾಟ್ಯ ಕಲೆ ಮತ್ತು ಭಾರತೀಯ ಸಂಸ್ಕೃತಿಯ ಕುರಿತು ಮಾತನಾಡಿದರು.
ವಿದುಷಿ ಕೆ.ಎಸ್.ಅಂಬಳೆ ರಾಜೇಶ್ವರಿ, ಚೇಂದಿರ ನಿರ್ಮಲ ಬೋಪಣ್ಣ, ಕೊಡಗಿನ ಹಿರಿಯ ಕಲಾವಿದರಾದ ಅಂಬಳೆ ಸತ್ಯಪ್ರಸಾದ್ ದಂಪತಿ, ಪ್ರೇಕ್ಷ ಭಟ್ ಅವರ ಗುರುಗಳಾದ ಬೆಂಗಳೂರಿನ ಧನ್ಯಶ್ರೀ, ಸೌತಡ್ಕ ಮಹಾ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ವೇದ ಪಂಡಿತರು ಆದ ಗೋಪಾಲಕೃಷ್ಣ ಗೋಕುಲ ಅಡಿಗ ದಂಪತಿ, ಕಾರ್ಯಕ್ರಮದಲ್ಲಿ ಹಿಮ್ಮೇಳದಲ್ಲಿ ಭಾಗವಹಿಸಿದ ಕಲಾವಿದರು, ರಂಗಸಜ್ಜಿಕೆ ಹಾಗೂ ಅಲಂಕಾರ ನಿರ್ವಹಿಸಿದ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕುಮಾರಿ ಪ್ರೇಕ್ಷ ಭಟ್ ಸತತ 2 ಗಂಟೆ ನೃತ್ಯ ಪ್ರದರ್ಶಿಸಿ ಕಲಾಸಕ್ತರ ಮೆಚ್ಚುಗೆಗೆ ಪಾತ್ರರಾದರು. ಪ್ರೇಕ್ಷ ಭಟ್ ಅವರ ಪೋಷಕರಾದ ವಿದ್ಯಾಶ್ರೀ ಹಾಗೂ ಎನ್.ಸಿ.ಅಶೋಕ್ ಭಟ್ ಉಪಸ್ಥಿತರಿದ್ದರು.












