ಕಡಂಗ ಡಿ.16 : ವಿರಾಜಪೇಟೆ ತಾಲ್ಲೂಕಿನ ಕುಂಜಲಗೇರಿ ಗ್ರಾಮದ ಬೆಟ್ಲಪ್ಪ ಈಶ್ವರ ದೇವರ ವಿಶೇಷ ಪೂಜೆಯು ಶ್ರದ್ಧಾಭಕ್ತಿಯಿಂದ ಜರುಗಿತು.
ನ.15 ರಿಂದ ಆರಂಭಗೊಂಡಿರುವ ಪೂಜೆಯು ಸುಮಾರು ಒಂದು ತಿಂಗಳ ಕಾಲ ನಡೆಯಿತು.
ಕೇರಳದ ಚೆಂಡೆ ವಾದ್ಯ ಹಾಗೂ ಮಹಾಪೂಜೆಯ ನಂತರ ಬೆಟ್ಟದ ಕೆಳಗೆ ಇರುವ ಅರಳಿ ಮರದ ಸುತ್ತ ದೇವರ ಬಲಿ ನಡೆಯಿತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರಿಗೆ ನೈವ್ಯದ್ಯ ಅರ್ಪಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯ ಪ್ರಮುಖರು ಹಾಗೂ ಪದಾಧಿಕಾರಿಗಳು ಪದಾಧಿಕಾರಿಗಳು ಹಾಜರಿದ್ದರು.
ವರದಿ : ನೌಫಲ್ ಕಡಂಗ