ಮಡಿಕೇರಿ ಡಿ.16 : ಸರ್ಕಾರಿ ದಾಖಲೆಗಳಲ್ಲಿ “ಕೊಡಗ” ಬದಲಿಗೆ “ಕೊಡವ” ಪದ ಬಳಕೆಗೆ ಅಧಿಕೃತ ಅನುಮೋದನೆ ದೊರೆಯಲು ಹೋರಾಟ ನಡೆಸಿದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಪ್ರಯತ್ನ ಶ್ಲಾಘನೀಯವೆಂದು ಬೆಂಗಳೂರು ಕೊಡವ ಸಮಾಜದ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರಿಗೆ ಪತ್ರ ಬರೆದಿರುವ ಕರವಟ್ಟಿರ ಟಿ.ಪೆಮ್ಮಯ್ಯ ಹಾಗೂ ಗೌರವ ಕಾರ್ಯದರ್ಶಿ ಚಿರಿಯಪಂಡ ವಿವೇಕ್ ಮುತ್ತಣ್ಣ ಅವರುಗಳು ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ನಮ್ಮ ಅಭಿಪ್ರಾಯಕ್ಕೆ ವಿರುದ್ಧವಾಗಿ “ಕೊಡಗ” ಎಂದು ನಮೂದಿಸಲಾಗುತ್ತಿತ್ತು. ಆದರೆ ಸಿಎನ್ಸಿ ಯ ಸುದೀರ್ಘ ಹೋರಾಟದ ಫಲವಾಗಿ ಇಂದು “ಕೊಡವ” ಎನ್ನುವುದು ಅಧಿಕೃತವಾಗಿದೆ. ಇದರಿಂದ ನಮ್ಮ ಮಕ್ಕಳ ಶೈಕ್ಷಣಿಕ ಹಾಗೂ ಉದ್ಯೋಗದ ಪ್ರಗತಿಗೆ ಸಹಕಾರಿಯಾಗಲಿದೆ. ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಸಹಪಾಠಿಗಳಿಗೆ ಕೃತಜ್ಞತೆ ಸಲ್ಲಿಸುವುದರೊಂದಿಗೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಕೋರುವುದಾಗಿ ತಿಳಿಸಿದ್ದಾರೆ.








