ಅರಂತೋಡು ಡಿ.18 : ಅರಂತೋಡುವಿನ ತೆಕ್ಕಿಲ್ ಹೆಚ್.ಪಿ. ಗ್ಯಾಸ್ ಏಜೆನ್ಸಿ ವತಿಯಿಂದ ಡಿ.19 ರಂದು ಪ್ರಧಾನಮತ್ರಿ ಉಜ್ವಲ ಯೋಜನೆಯಡಿಯಲ್ಲಿ ಆಯ್ಕೆಯಾದ ಬಿ.ಪಿ.ಎಲ್ ಕಾರ್ಡ್ ದಾರರಿಗೆ ಉಚಿತ ಗ್ಯಾಸ್ ಸಂಪರ್ಕ ವಿತರಣಾ ಕಾರ್ಯಕ್ರಮ ನಡೆಯಲಿದೆ.
ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿರಿಸೌಧ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಳ್ಯ ವಿಧಾನ ಸಭಾಕ್ಷೇತ್ರದ ಶಾಸಕಿ ಭಾಗಿರಥಿ ಮುರುಳ್ಯ ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಣೆ ಮಾಡಲಿದ್ದಾರೆ.
ತೆಕ್ಕಿಲ್ ಹೆಚ್.ಪಿ ಗ್ಯಾಸ್ ಏಜೆನ್ಸಿಯ ಮಾಲೀಕ ಟಿ.ಎಂ ಶಹೀದ್ ತೆಕ್ಕಿಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿ ಸುಳ್ಯ ತಾ.ಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಅರಂತೋಡು ಜಿ.ಪಂ ನ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಗೌರವ ಉಪಸ್ಥಿತಿಯಾಗಿ ಆಗಮಿಸಲಿದ್ದಾರೆ.
ಮುಖ್ಯ ಅಥಿತಿಗಳಾಗಿ ಅರಂತೋಡು ಗ್ರಾ.ಪಂ ಅಧ್ಯಕ್ಷ ಕೇಶವ ಅಡ್ತಲೆ, ಅರಂತೊಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ವಿವಿಧ ಗ್ರಾ.ಪಂ ಅಧ್ಯಕ್ಷರಾದ ಸುಮತಿ ಶಕ್ತಿಮೇಲು ಸಂಪಾಜೆ, ರಮಾದೇವಿ ಕಳಗಿ ಕೊಡಗು ಸಂಪಾಜೆ, ಗೀತಾ ಬಳ್ಳಕಾನ ಮರ್ಕಂಜ, ಚಂದ್ರಕಲಾ ಪೆರಾಜೆ, ತೀರ್ಥರಾಮ ಚೆಂಬು, ವೀಣಾಕುಮಾರಿ ಆಲೆಟ್ಟಿ, ಧನಂಜಯ ಕುಮಾರ್ ನೆಲ್ಲೂರು ಕೆಮ್ರಾಜೆ, ಕುಶಲ ಉದ್ದಂತಡ್ಕ ಮಂಡೆಕೋಲು, ತಿರುಮಲೇಶ್ವರಿ ಜಾಲ್ಸ್ಸೂರು, ನಮಿತಾ ರೈ ಬೆಳ್ಳಾರೆ, ಶಾರದಾ ಕನಕಮಜಲು, ಲೀಲಾವತಿ ಕುತ್ಯಾಡಿ ಐವರ್ನಾಡು, ಜಾನಕಿ ಕಂದಡ್ಕ ಅಮರಮುಡ್ನೂರು, ಬೇಬಿ ಕಲ್ತಡ್ಕ ಅಜ್ಜಾವರ, ಹಾಗೂ ಅರಂತೋಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಸೇರಿದಂತೆ ಮತ್ತಿರ ಗಣ್ಯರು ಪಾಲ್ಗೊಳ್ಳಲಿದ್ದಾರೆ.