ಮಡಿಕೇರಿ ಡಿ.19 : ಸರಕಾರಿ ದಾಖಲೆಗಳಲ್ಲಿ “ಕೊಡಗರು” ಬದಲಿಗೆ “ಕೊಡವ” ಎಂದು ನಮೂದಿಸಲು ಕಾನೂನು ಹೋರಾಟ ನಡೆಸಿ ಯಶಸ್ವಿಯಾದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಪ್ರಯತ್ನಕ್ಕೆ ಅರಪಟ್ಟು ಮುಕ್ಕಾಟಿರ ಕುಟುಂಬಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರಿಗೆ ಅಭಿನಂದನಾ ಪತ್ರ ಬರೆದಿರುವ ಅರಪಟ್ಟು ಮುಕ್ಕಾಟಿರ ಕುಟುಂಬದ ಅಧ್ಯಕ್ಷ ಮುಕ್ಕಾಟಿರ ಕ್ಯಾಟಿ ಉತ್ತಪ್ಪ ಅವರು, ಕಳೆದ ಹಲವು ವರ್ಷಗಳ ಗೊಂದಲ ನಿವಾರಣೆಗೆ ನಿರಂತರ ಹೋರಾಟದ ಮೂಲಕ ಶ್ರಮಿಸಿದ ನಿಮ್ಮ ಕಾರ್ಯ ಶ್ಲಾಘನೀಯ. ಇದಕ್ಕಾಗಿ ಇಡೀ ಅರಪಟ್ಟು ಮುಕ್ಕಾಟಿರ ಕುಟುಂಬಸ್ಥರು ಆಭಾರಿಯಾಗಿದ್ದೇವೆ. ಸರಕಾರಿ ದಾಖಲೆಗಳಲ್ಲಿ “ಕೊಡಗರು” ಬದಲಿಗೆ “ಕೊಡವ” ಎಂದು ನಮೂದಿಸುವ ಕ್ರಮ ಸ್ವಾಗತಾರ್ಹವಾಗಿದೆ. ಇನ್ನು ಮುಂದೆಯೂ ಕೊಡವರ ಪರವಾದ ನ್ಯಾಯಸಮ್ಮತ ಬೇಡಿಕೆಗಳ ಹೋರಾಟಕ್ಕೆ ಜಯ ಸಿಗಲಿ ಎಂದು ತಿಳಿಸಿದ್ದಾರೆ.
Breaking News
- *ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಲರವ*
- *ಕಬ್ಬಚ್ಚಿರ ರಶ್ಮಿ ಕಾರ್ಯಪ್ಪಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ*
- *ಬೋಯಿಕೆರಿ ಅಂಗನವಾಡಿಯಲ್ಲಿ ನಿವೃತ್ತ ಕಾರ್ಯಕರ್ತೆಯರಿಗೆ ಬೀಳ್ಕೊಡುಗೆ : ಸಂಸ್ಕಾರವಂತ ಸಮಾಜ ನಿರ್ಮಾಣದ ರೂವಾರಿಗಳು ಅಂಗನವಾಡಿ ತಾಯಂದಿರು : ತೆನ್ನಿರ ಮೈನಾ ಶ್ಲಾಘನೆ*
- *ವ್ಯಾoಡಮ್ ಎಂಟರ್ಪ್ರೈಸಸ್ ನ ವಾರ್ಷಿಕೋತ್ಸವ : ನ.24 ರಂದು ಲಕ್ಕಿ ಡ್ರಾ ಸಮಾರಂಭ*
- *ಮಾದರಿ ವಿಶೇಷಚೇತನರ ಸ್ವ ಸಹಾಯ ಸಂಘ ಹಾಗೂ ಮಾದರಿ ಗ್ರಾಮ/ ಪಟ್ಟಣ ಪಂಚಾಯತ್ ಪ್ರಶಸ್ತಿಗೆ ಅರ್ಜಿ ಆಹ್ವಾನ*
- *ಹೊಸ್ಕೇರಿಬೆಟ್ಟ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ*
- *ಕೊಡಗು : ಸಹಕಾರ ಸಂಘಗಳ ಸುಸ್ಥಿರತೆಗೆ ಎಲ್ಲರೂ ಶ್ರಮಿಸಿ : ಕೆ.ಎನ್.ರಾಜಣ್ಣ ಸಲಹೆ*
- *ಮಡಿಕೇರಿಯಲ್ಲಿ ಪೌರಕಾರ್ಮಿಕರ ದಿನಾಚರಣೆ : ಪೌರಕಾರ್ಮಿಕರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ : ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*