ಮಡಿಕೇರಿ ಡಿ.19 : ಬೆಂಗಳೂರಿನ ಯಶವಂತಪುರದ ಜಿಸಿಆರ್ ಸಭಾಂಗಣದಲ್ಲಿ ನಡೆದ ಅಂತರಾಜ್ಯ ಮಟ್ಟದ ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ಮಟ್ಟದ ಬಾಲಕ ಹಾಗೂ ಬಾಲಕಿಯರ ಮುಕ್ತ ಟೆಕ್ವಾಂಡೊ ಚಾಂಪಿಯನ್ ಶಿಪ್ ನಲ್ಲಿ ಮಡಿಕೇರಿಯ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳಾದ ಆರ್.ಲೋಹಿತ್ 2 ಚಿನ್ನ, ಮುಡ್ಯನ ಗೌರವ್ 2 ಚಿನ್ನ, ಮನೀಶ್ ನಾಥ್ 2 ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಆರ್.ಮಾನ್ವಿ 1 ಚಿನ್ನ, 1 ಬೆಳ್ಳಿ, ಬಾರನ ಬಿಂಬಿತ್ ಗೌಡ 1 ಚಿನ್ನ, 1 ಬೆಳ್ಳಿ, ನಿಲಾ ಜಾಯಿಸನ್ 1 ಚಿನ್ನ, 1 ಬೆಳ್ಳಿ, ಕಿರಣ್ ಕಾಂತ್ 1 ಚಿನ್ನ, 1 ಬೆಳ್ಳಿ, ಪಿ.ಬಿ.ಶಿವ 1 ಚಿನ್ನ, 1 ಬೆಳ್ಳಿ, ಬಾರನ ಪ್ರೇಕ್ಷಿತ್ ಗೌಡ 1 ಚಿನ್ನ, 1 ಕಂಚು, ಮಾನ್ಯ ರಾಜ್ 1 ಚಿನ್ನ, 1 ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.
ಜಿ.ಎಂ.ಮಿನ್ ಶಾ 2 ಬೆಳ್ಳಿ, ವಿ.ಕಿಶಾನ್ 2 ಬೆಳ್ಳಿ, ಐಡೆನ್ ಜೋಯ್ಸನ್ 2 ಬೆಳ್ಳಿ ಪಡೆದುಕೊಂಡಿದ್ದು, ಜಿ.ಡಿ.ಸಮರ್ಥ್ 1 ಬೆಳ್ಳಿ, 1 ಕಂಚು, ಎಂ.ಪಿ.ವಿಕಾಸ್ 1 ಬೆಳ್ಳಿ 1 ಕಂಚು, ದೃಪದ್ ಪಿ.ಮಣಿಕೋತ್ 1 ಚಿನ್ನ, 1 ಬೆಳ್ಳಿಯ ಪದಕವನ್ನು ಗೆದ್ದಿದ್ದಾರೆ.
ಕೂರ್ಗ್ ಟೆಕ್ವಾಂಡೊ ತರಬೇತಿ ಸಂಸ್ಥೆಯ ತರಬೇತುದಾರ ಬಿ.ಜಿ.ಲೋಕೇಶ್ ರೈ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.