ಮಡಿಕೇರಿ ಡಿ.19 : ಮಹಿಳೆಯರು ಮನೆಯ ನಾಲ್ಕು ಗೋಡೆಗಳ ನಡುವಿನಿಂದ ಹೊರಬಂದಾಗ ಮಾತ್ರ ಅವರ ಮನಸ್ಸಿನಲ್ಲಿನ ಸುಪ್ತ ಪ್ರತಿಭೆ ಹೊರಬರಲು ಸಾಧ್ಯವಾಗುತ್ತದೆ ಎಂದು ಆಕಾಶವಾಣಿಯ ಹಿರಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಅಭಿಪ್ರಾಯಪಟ್ಟಿದ್ದಾರೆ.
ನಗರದ ರೆಡ್ ಬ್ರಿಕ್ಸ್ ಇನ್ ಸಭಾಂಗಣದಲ್ಲಿ ಮಡಿಕೇರಿಯ ರಾಧಿಕಾ ವಿಶ್ವನಾಥ್ ಬರೆದಿರುವ ಒಲವಧಾರೆ ಕವನ ಸಂಕಲನ ಲೋಕಾಪ೯ಣೆ ಕಾಯ೯ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಹಿರಿಯ ಲೇಖಕ, ಕಲಾವಿದ ಸುಬ್ರಾಯ ಸಂಪಾಜೆ, ಗೃಹಿಣಿಯೋವ೯ಳು ಮನೆಯವರ ಪಾಲಿಗೆ ಅಮ್ಮ, ಅತ್ತೆ, ಸಹೋದರಿ, ನಾದಿನಿ ಮುಂತಾದ ಸಂಬಂಧ ಮಾತ್ರ ಆಗಿರುವ ಮನಸ್ಥಿತಿಯಲ್ಲಿ ಆಕೆಯ ನಿಜವಾದ ಪ್ರತಿಭೆ ಬೆಳಕಿಗೆ ಬರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಗೃಹಿಣಿಯೋವ೯ಳು ಸಮಾಜದ ಮುಖ್ಯವಾಹಿನಿಗೆ ಬಂದು ತನ್ನ ಸುಪ್ತ ಪ್ರತಿಭೆ ಬೆಳಕಿಗೆ ತಂದಾಗ ಮಾತ್ರ ಆಕೆ ಸಾಧಕಿಯಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಹಿರಿಯ ಲೇಖಕ ಜಿ.ಟಿ. ರಾಘವೇಂದ್ರ ಮಾತನಾಡಿ, ಇಂದಿನ ದಿನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಲೇಖಕರು, ಕವಿಗಳು ಹೊರಹೊಮ್ಮುತ್ತಿದ್ದಾರೆ. ಇಂಥವರಿಂದ ಸಾಹಿತ್ಯ ಕ್ಷೇತ್ರಕ್ಕೆ ಸುದೀಘ೯ ಕಾಲ ಸ್ಮರಣೀಯವಾಗುವ ಸಾಹಿತ್ಯ ದೊರಕವಂತಾಗಲಿ ಎಂದು ಹಾರೈಸಿದರು.
ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಸಾಹಿತ್ಯದ ನಿರಂತರ ಕಲಿಕೆ, ಓದಿನ ಮೂಲಕ ಬರವಣಿಗೆಯನ್ನು ಸಿದ್ದಿಸಿಕೊಳ್ಳಲು ಸಾಧ್ಯ ಎಂದರು.
ಕವಿಯತ್ರಿ ರಾಧಿಕಾ ಅವರ ತಂದೆ ಅನಂತರಾಮಯ್ಯ ಮಾತನಾಡಿ, ಸಮಾಜಕ್ಕೆ ಒಳಿತಾಗುವಂಥ ಕಾಯ೯ಗಳಿಗೆ ದೇವರ ಅನುಗ್ರಹ ಸದಾ ಇರುತ್ತದೆ ಎಂದು ಹಾರೈಸಿದರು.
ಪತ್ರಕತ೯, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಇತ್ತೀಚಿನ ವಷ೯ಗಳಲ್ಲಿ ಕೊಡಗಿನಲ್ಲಿ ಸಾಹಿತ್ಯ ಪರ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಕನ್ನಡ ಸಾಹಿತ್ಯ ಪರಿಷತ್, ಜಾನಪದ ಪರಿಷತ್, ಸೇರಿದಂತೆ ವಿವಿಧ ಸಾಹಿತ್ಯ ಪರ ಸಂಘಟನೆಗಳಲ್ಲಿ ನೂರಾರು ಲೇಖಕ, ಲೇಖಕಿಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದೇ ಇದಕ್ಕೆ ಕಾರಣ ಎಂದರು. ರಾಧಿಕಾ ವಿಶ್ವನಾಥ್ ತನ್ನ ಕಾವ್ಯ ಸಂಕಲನದ ಬಿಡುಗಡೆ ಸಂದಭ೯ ಕವನ, ಗಾಯನ, ನೃತ್ಯ ಪ್ರತಿಭೆಗಳಿಗೆ ವೇದಿಕೆಯಲ್ಲಿ ಅವಕಾಶ ನೀಡುವ ಮೂಲಕ ಸಾಹಿತ್ಯ – ಸಾಂಸ್ಕೃತಿಕ ಲೋಕದ ಸಂಗಮದಂತೆ ಕಾಯ೯ಕ್ರಮ ರೂಪಿಸಿರುವುದು ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ಹೆಮ್ಮೆ ಪಟ್ಟರು.
ಲೇಖಕಿ ರಾಧಿಕಾ ವಿಶ್ವನಾಥ್ ಮಾತನಾಡಿ, ಮನಸ್ಸಿನ ಸಂತೋಷಕ್ಕಾಗಿ ಕವಿತೆ ಬರೆಯಲು ಪ್ರಾರಂಭಿಸಿದ ತನಗೆ ಕಾವ್ಯಗಳು ಭಾವಾನುಭೂತಿಯ ಅನಾವರಣಕ್ಕೆ ನೆರವಾದವು. ಅನೇಕರ ಪ್ರಶಂಸೆಯ ನುಡಿಗಳೇ ಪ್ರೋತ್ಸಾಹ ನೀಡುವ ಮೂಲಕ 108 ಕವನಗಳ ಒಲವ ಧಾರೆ ಕಾವ್ಯ ಸಂಕಲನ ಪ್ರಕಟಿಸಲು ಸಾಧ್ಯವಾಯಿತು ಎಂದು ಸ್ಮರಿಸಿಕೊಂಡರು.
ಕೃಷ್ಣವೇಣಿ ಪ್ರಸಾದ್ ಮುಳಿಯ ಪ್ರಾಥಿ೯ಸಿ, ವಿಜಯಲಕ್ಷ್ಮೀ ಚೇತನ್ ನಿರೂಪಿಸಿದ ಕಾಯ೯ಕ್ರಮದಲ್ಲಿ ಕೆ.ಕೆ.ವಿಶ್ವನಾಥ್ ಸ್ವಾಗತಿಸಿ, ಗೌರಿ ಹಿರಿಯಣ್ಣ ವಂದಿಸಿದರು. ಕಾಯ೯ಕ್ರಮದಲ್ಲಿ ರಾಧಿಕಾ ವಿಶ್ವನಾಥ್ ವಿರಚಿತ ಕವನಗಳನ್ನು ಆದರಿಸಿ, ವಿವಿಧ ಗಾಯಕರಿಂದ ಹಾಡುಗಾರಿಕೆ , ಕಾವ್ಯಶ್ರೀ ಕಪಿಲ್ ತಂಡದಿಂದ ನೃತ್ಯವೈವಿಧ್ಯ, ಜರುಗಿತು.