ಮಡಿಕೇರಿ ಡಿ.19 : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಕಟಿಸಲಾಗುತ್ತಿರುವ ‘ಹಿಂಗಾರ’ ತ್ರೈಮಾಸಿಕಕ್ಕೆ ಅರೆಭಾಷೆಯಲ್ಲಿ ಕಥೆ, ಕವನ, ಲೇಖನ, ಜಾನಪದ, ಸಂಸ್ಕೃತಿ , ಕಲೆ, ಸಾಹಿತ್ಯ, ವ್ಯಕ್ತಿಚಿತ್ರ, ಹನಿಗವನ ಮತ್ತಿತರ ವಿಷಯಗಳ ಕುರಿತ ಬರಹ/ ಲೇಖನಗಳನ್ನು ಆಹ್ವಾನಿಸಲಾಗಿದೆ.
ಆಸಕ್ತರು ಜ.5 ರೊಳಗೆ ‘ಅರೆಭಾಷೆಯಲ್ಲಿ ಬರಹ’ಗಳನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಚೇರಿ, ಕಾಫಿ ಕೃಪಾ ಕಟ್ಟಡ, 1 ನೇ ಮಹಡಿ, ರಾಜಾಸೀಟು ರಸ್ತೆ, ಮಡಿಕೇರಿ 571 201 ಇಲ್ಲಿಗೆ ‘ವಿಷಯ ಆಧಾರಿತ ಚಿತ್ರಸಹಿತ ಬರಹ’ಗಳನ್ನು ಲಿಖಿತವಾಗಿ ಸಲ್ಲಿಸಲು ಕೋರಿದೆ.
ಹೆಚ್ಚಿನ ಮಾಹಿತಿಗೆ ರಿಜಿಸ್ಟ್ರಾರ್ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ ಕಟ್ಟಡ, ಮಡಿಕೇರಿ, ಕೊಡಗು ಜಿಲ್ಲೆ ಅಥವಾ ಮೊಬೈಲ್ ಸಂಖ್ಯೆ 6362588677 ಸಂಪರ್ಕಿಸಬಹುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ತಿಳಿಸಿದ್ದಾರೆ.









