ಮಡಿಕೇರಿ ಡಿ.20 : ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ 11 ಸ್ಟಾರ್ಸ್ ಕ್ರಿಕೆಟರ‍್ಸ್ ವತಿಯಿಂದ ಕಂಬಿಬಾಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.23 ಹಾಗೂ 24 ರಂದು ಮೊದಲನೇ ವರ್ಷದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಪ್ರಥಮ ಬಹುಮಾನವಾಗಿ ರೂ.30 ಸಾವಿರ ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ರೂ.20 ಸಾವಿರ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಇದಲ್ಲದೆ ವೈಯಕ್ತಿಕ ಪ್ರಶಸ್ತಿಗಳಾದ ಉತ್ತಮ ಬ್ಯಾಟ್ಸ್‍ಮ್ಯಾನ್, ಉತ್ತಮ ಬೌಲರ್, ಸರಣಿ ಶ್ರೇಷ್ಠ, ಪಂದ್ಯ ಪುರುಶೋತ್ತಮ ಪ್ರಶಸ್ತಿ ವಿತರಿಸಲಾಗುತ್ತದೆ.

ಸಾಧಕರಿಗೆ ಸನ್ಮಾನ : ಡಿ.23ರ ಶನಿವಾರ ರಾತ್ರಿ 7.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಇತ್ತೀಚೆಗೆ ನಡೆದ ಮೂರು ರಾಷ್ಟ್ರಗಳ ನಡುವಿನ 16ನೇ ಏಷ್ಯನ್ ಓಪನ್ ಕರಾಟೆ ಚಾಂಪಿಯನ್‍ಶಿಪ್ ನಲ್ಲಿ ಭಾಗವಹಿಸಿ ಎರಡು ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಅರ್ಚನಾ ಜಯನ್ ಹಾಗೂ ಅಪ್ಸರ ಜಯನ್, ಪೊಲೀಸ್ ಅಧಿಕಾರಿ ಶ್ರೀನಿವಾಸ್ ಎಸ್.ಎಸ್, ರಾಜ್ಯ ಸಬ್ ಜೂನಿಯರ್ ಕಬಡ್ಡಿ ಆಟಗಾರ ಎಚ್.ಎಂ. ಅನೀಶ್ ಅವರನ್ನು ಸನ್ಮಾನಿಸಲಾಗುತ್ತಿದೆ.












