ಕಡಂಗ ಡಿ.20 : ಕೊಡಗು ಮುಸ್ಲಿಂ ಕ್ರಿಕೆಟ್ ಟ್ರಸ್ಟ್ ನ ಸಿ.ಎ.ರಾಜಿಕ್ ಅವರನ್ನು ಆಯ್ಕೆ ಮಾಡಲಾಯಿತು.
ಮುರ್ನಾಡುವಿನ ಉಸ್ತಾದ್ ಹೋಟೆಲ್ ಸಭಾಂಗಣದಲ್ಲಿ ಟ್ರಸ್ಟನ ಅಧ್ಯಕ್ಷ ಅಬ್ದುಲ್ ಖಾದರ್ ಹಾಕತೂರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜಿಕ್ ಅವರನ್ನು ಆಡಳಿತ ಮಂಡಳಿಯ ಸರ್ವ ಸದಸ್ಯರ ಒಮ್ಮತದಿಂದ ಆಯ್ಕೆ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದರು.
ಇದೇ ಸಂದರ್ಭ ಟ್ರಸ್ಟಿನ ನಿರ್ದೇಶಕರಾಗಿ ಗೋಣಿಕೊಪ್ಪಲುವಿನ ಫೈಜ್ ಅಹಮ್ಮದ್ ಅವರನ್ನು ಸೇರ್ಪಡೆಗೊಳಿಸಲಾಯಿತು.
ಸಭೆಯಲ್ಲಿ ಮುಂದಿನ ವರ್ಷ ನಡೆಯುವ ಕ್ರಿಕೆಟ್ ಪಂದ್ಯಾವಳಿಯ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಮುಸ್ಲಿಂ ಕ್ರಿಕೆಟ್ ಕಪ್ ಸ್ಥಾಪಕ ರಶೀದ್ ಎಡಪಾಲ ಮತ್ತು ಸದಸ್ಯರು ಪಾಲ್ಗೊಂಡಿದ್ದರು. ಟ್ರಸ್ಟಿನ ಕಾರ್ಯದರ್ಶಿ ಆದಂ ಸ್ವಾಗತಿಸಿದರು.
ವರದಿ : ನೌಫಲ್ ಕಡಂಗ









