ಮಡಿಕೇರಿ ಡಿ.21 : ಇಂದಿರಾನಗರದ ಕುಂದುರು ಮೊಟ್ಟೆ ಶ್ರೀ ಮಾರಿಯಮ್ಮ ದೇವಾಲಯದ ಜೀರ್ಣೋದ್ಧಾರದ ಅಂಗವಾಗಿ ಸುದರ್ಶನ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು.
ದೇವಾಲಯದ ಆವರಣದಲ್ಲಿ ತಂತ್ರಿಗಳಾದ ಕೇರಳದ ಮನೋಹರ್ ಪಣಿಕರ್ ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು.
ಮುಂಜಾನೆಯಿಂದಲೆ ಗಣಪತಿ ಹೋಮ, ಸುದರ್ಶನ್ ಹೋಮ, ಅಗೋರ ಹೋಮ, ಪ್ರತ್ಯಂಗರಿ ಹೋಮ, ಯಮರಾಜ ಹೋಮ, ತಿಲ ಹೋಮ, ದುರಿದ ವೆರವಾಡ್ ಹೋಮ, ಪ್ರೇತ ಹೋಮ, ಸಾಯುಜ್ಯ ಹೋಮ, ರಾಜಗೋಪಾಲ್ ಹೋಮ ಹಾಗೂ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು, ಹಾಗೂ ಇಂದಿರ ನಗರ, ತಾಳತ್ ಮನೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.








