ನಾಪೋಕ್ಲು ಡಿ.21 : ಮಡಿಕೇರಿಯ ತನಲ್ ನೆರಳಿನ ಮನೆಯ ವೃದ್ಧಾಶ್ರಮದ ವತಿಯಿಂದ ನಡೆದ ವಾರ್ಷಿಕ ಸಭೆಯಲ್ಲಿ ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣಾ ಘಟಕದ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸಮರ್ಥ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಳೆದ ಎರಡು ವರ್ಷಗಳಿಂದ ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣಾ ಘಟಕ ತಂಡವು ಮಡಿಕೇರಿಯಲ್ಲಿರುವ ತನಲ್ ನೆರಳಿನ ಮನೆ ವೃದ್ಧಾಶ್ರಮಕ್ಕೆ ಹೋಗಿ ತನ್ನ ಕೈಲಾದಂತಹ ಸೇವೆಯನ್ನ ಮಾಡುತ್ತಾ ಬರುತ್ತಿತ್ತು. ಮಾತ್ರವಲ್ಲದೇ ವಿವಿಧ ಕಡೆಯಲ್ಲೂ ನಿಸ್ವಾರ್ಥ ಸೇವೆಯನ್ನ ಮಾಡುತ್ತಿರುವುದನ್ನು ಗಮನಿಸಿದ ನೆರಳಿನ ಮನೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಾರ್ಷಿಕ ಸಭೆಯಲ್ಲಿ ಸಮರ್ಥ ಸೇವಾ ಪುರಸ್ಕಾರ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಬಾಳೆಯಡ ದಿವ್ಯ ಮಂದಪ್ಪ ಅವರ ತಂಡದ ಸ್ವಯಂ ಸೇವಕರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ








