ನಾಪೋಕ್ಲು ಡಿ.22 : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಾಪೋಕ್ಲು ಸಮೀಪದ ಬೋಳಿಬಾಣೆ ಎಂಬಲ್ಲಿ ನಡೆದಿದೆ.
ಮೂರ್ನಾಡು ಕಡೆಯಿಂದ ನಾಪೋಕ್ಲು ಕಡೆಗೆ ಬರುತ್ತಿದ್ದ ಬಲ್ಲಮಾವಟ್ಟಿಯ ಪೇರೂರು ಗ್ರಾಮದ ಚಂಗೇಟಿರ ರವೀಂದ್ರ ಚಲಾಯಿಸುತ್ತಿದ್ದ ಮಾರುತಿ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಚಾಲಕ ರವೀಂದ್ರ ಮತ್ತು ಅವರ ಮಗಳು ಕಾರಿನಲ್ಲಿದ್ದು, ನನ್ನ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ .
ವರದಿ : ದುಗ್ಗಳ ಸದಾನಂದ








