ಮಡಿಕೇರಿ ಡಿ.22 : ಕಕ್ಕಬೆ ಕ್ಲಸ್ಟರ್ ನ ಗಣಿತ ಪರೀಕ್ಷೆಯಲ್ಲಿ ಕಕ್ಕಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಕಕ್ಕಬೆ ಯ 4ನೇ ತರಗತಿ ವಿದ್ಯಾರ್ಥಿ ಶರಣ್ ಮತ್ತು 6ನೇ ತರಗತಿ ವಿದ್ಯಾರ್ಥಿ ಅಜಯ್ ಗಣಿತ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಅಲ್ಲದೇ ನಾಲಾಡಿ ಶಾಲೆ ಯ 5ನೇ ತರಗತಿ ವಿದ್ಯಾರ್ಥಿ ರಾಜೇಶ್ ಪ್ರಥಮ ಸ್ಥಾನ ಪಡೆದುಕೊಂಡು ಕೊಂಡಿದ್ದಾನೆ. ವಿದ್ಯಾರ್ಥಿಗಳ ಈ ಸಾಧನೆಗೆ ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












