ಮಡಿಕೇರಿ ಡಿ.22 – ವಿವಿಧ ಸೇವಾ ಯೋಜನೆಗಳಿಗಾಗಿ ರಾಜ್ಯದಲ್ಲಿಯೇ ಅತ್ಯುತ್ತಮ ಕಾಯ೯ನಿವ೯ಹಣೆಗಾಗಿ ರಾಜ್ಯಪಾಲರಿಂದ ಪ್ರಶಸ್ತಿಗೆ ಪಾತ್ರವಾದ ಕೊಡಗು ಜಿಲ್ಲಾ ರೆಡ್ ಕ್ರಾಸ್ ಘಟಕಕ್ಕೆ ಜಿಲ್ಲಾಧಿಕಾರಿ ವೆಂಕಟ ರಾಜಾ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತೀಯ ರೆಡ್ ಕ್ರಾಸ್ ನ ಕೊಡಗು ಜಿಲ್ಲಾ ಘಟಕವು ಕಳೆದ 1 ವಷ೯ದಲ್ಲಿ ಕೈಗೊಂಡ ರಕ್ತನಿಧಿ ಶಿಬಿರ, ಆರೋಗ್ಯ ತಪಾಸಣೆ ಶಿಬಿರ, ಮಳೆ ಹಾನಿ ಸಂತ್ರಸ್ಥರಿಗೆ ನೆರವು, ಅತ್ಯಧಿಕ ಸಂಖ್ಯೆಯಲ್ಲಿ ಅಜೀವ ಸದಸ್ಯರ ನೋಂದಣಿ, ವಿದ್ಯಾಥಿ೯ ಘಟಕಗಳ ಸಕ್ರಿಯ ಕಾಯ೯ಚಟುವಟಿಕೆ, ಸ್ವಂತ ಕಟ್ಟಡ ನಿಮಾ೯ಣ ಸೇರಿದಂತೆ ವಿವಿಧ ಕಾಯ೯ಯೋಜನೆಗಳನ್ನು ಪರಿಗಣಿಸಿ ರಾಜ್ಯದಲ್ಲಿಯೇ ಅತ್ಯುತ್ತಮ ಘಟಕ ಎಂದು ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋಟ್ ಇತ್ತೀಚಿಗೆ ಬೆಂಗಳೂರಿನ ರಾಜಭವನದಲ್ಲಿ ಆಯೋಜಿತ ವಾಷಿ೯ಕ ಮಹಾಸಭೆಯಲ್ಲಿ ಕೊಡಗು ರೆಡ್ ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದರು.
ಈ ಹಿನ್ನಲೆಯಲ್ಲಿ ಕೊಡಗು ರೆಡ್ ಕ್ರಾಸ್ ವತಿಯಿಂದ ಕಾಯ೯ಯೋಜನೆಗಳಿಗೆ ಸೂಕ್ತ ಮಾಗ೯ದಶ೯ನ ನೀಡುತ್ತಿರುವ ರೆಡ್ ಕ್ರಾಸ್ ಜಿಲ್ಲಾ ಸಭಾಧ್ಯಕ್ಷರಾದ ಜಿಲಾಧಿಕಾರಿ ವೆಂಕಟ ರಾಜ ಅವರಿಗೆ ಧನ್ಯವಾದ ಸಲ್ಲಿಸಲಾಯಿತು.ಈ ಸಂದಭ೯ ಕೊಡಗು ರೆಡ್ ಕ್ರಾಸ್ ನ ಸಾಧನೆಗಳಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ, ಮುಂದಿನ ದಿನಗಳಲ್ಲಿಯೂ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ನೆರವನ್ನು ರೆಡ್ ಕ್ರಾಸ್ ನ ಜನಪರ ಕಾಯ೯ಕ್ರಮಗಳಿಗೆ ನೀಡುವುದಾಗಿ ಭರವಸೆ ನೀಡಿದರು.
ಕೊಡಗು ರೆಡ್ ಕ್ರಾಸ್ ಸಭಾಪತಿ ಬಿ.ಕೆ. ರವೀಂದ್ರ ರೈ, ಉಪಾಧ್ಯಕ್ಷ ಅನಿಲ್ ಎಚ್.ಟಿ. ಪ್ರಧಾನ ಕಾಯ೯ದಶಿ೯ ಎಚ್.ಆರ್. ಮುರಳೀಧರ್ , ನಿದೇ೯ಶಕರಾದ ಎಂ.ಧನಂಜಯ್, ಸತೀಶ್ ರೈ, ವಿಜಯ್ ಶೆಟ್ಟಿ. ಶರತ್ ಶೆಟ್ಟಿ ಹಾಜರಿದ್ದರು.






