ವಿರಾಜಪೇಟೆ ಡಿ.23 : ವಿರಾಜಪೇಟೆ ಕಾನ್‍ಫ್ರೆಂಡ್ಸ್ ಸ್ನೇಹಿತರ ಬಳಗದ ವತಿಯಿಂದ ವತಿಯಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಮೂವರು ಸಾಧಕರನ್ನು ಸನ್ಮಾನಿಸಲಾಯಿತು.
ನಗರದ ಕ್ರೇಡೊ ಮೆಡಿಕಲ್ ಸೆಂಟರ್ ಸಮೀಪದ ಖಾಸಗಿ ಸ್ಥಳದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅಂತರ್ ರಾಷ್ಟೀಯ ಮಟ್ಟದ ಏಷ್ಯಾ ಫೆಸಿಫಿಕ್ ಕಾರ್ ರ‍್ಯಾಲಿ ಚಾಂಪಿಯನ್‍ಶಿಪ್‍ನಲ್ಲಿ ಪ್ರಥಮ ಸ್ಥಾನ ಪಡೆದ ಸುಹೇಮ್ ಕಬೀರ್, ಕೀರ್ತನ್ ಕುಟ್ಟಪ್ಪ, ಕೂರ್ಗ್ ಮಾರುತಿ ಪಾಯಿಂಟ್ ಮಾಲೀಕರಾದ ಶಾಫಿ ಅಹಮ್ಮದ್, ಅಂತರ್ ರಾಷ್ಟ್ರೀಯ ರಗ್ಬಿ ಪಟು ಮಾದಂಡ ಪಿ.ತಿಮ್ಮಯ್ಯ ಹಾಗೂ ಮತ್ತು ಹೊಂಡಾ ಶೋ ರೂಂ ಮಾಲೀಕರಾದ ಮೊಹಮ್ಮದ್ ಕಬೀರ್ ಅವರನ್ನು ಬಳಗದ ಪ್ರಮುಖರು ಹಾಗೂ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭ ಮಾತನಾಡಿದ ಪುರಸಭೆಯ ಸದಸ್ಯ ಮೊಹಮ್ಮದ್ ರಾಫಿ, ಜಿಲ್ಲೆಯಲ್ಲಿ ಎಲ್ಲಾ ರೀತಿಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ.ಗಾಲ್ಫ್, ರಗ್ಬಿ, ಟೆನ್ನಿಸ್, ಆಟೋ ಕ್ರಾಸ್ ನಂತಹ ಕ್ರೀಡೆಗಳನ್ನು ಅರಿಯಲು ಮತ್ತು ಕಲಿಯಲು ಗರಿಷ್ಟ ಮಟ್ಟದಲ್ಲಿ ಧನ ವ್ಯಯವಾಗುತ್ತದೆ. ಆದರೂ ಮಕ್ಕಳ ಸಾಧನೆಗೆ ಅಡ್ಡಿಯಾಗದೆ ಪೋಷಕರು ಪ್ರೋತ್ಸಾಹ ನೀಡುತ್ತಿರುವುದು ಸಂತೋಷದಾಯಕ ಬೆಳವಣಿಗೆಯಾಗಿದೆ ಎಂದರು. ಪೋಷಕರ ಶ್ರಮ ಮತ್ತು ಕಲಿಕೆಯ ಆಸಕ್ತಿಯಿಂದ ಸುಹೇಮ್ ಕಭೀರ ಅವರು ವಿಶಿಷ್ಟ ಸಾಧನೆ ಮಾಡಿದ್ದು, ಜಿಲ್ಲೆ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಪುರಸಭೆಯ ಸದಸ್ಯ ಎಸ್.ಹೆಚ್.ಮತೀನ್ ಮಾತನಾಡಿ, ಬಾಲ್ಯದಿಂದಲೇ ತಮಗಿಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಮಕ್ಕಳ ಚಿಂತನೆಗೆ ಪೋಷಕರು ಪ್ರೋತ್ಸಹ ನೀಡುವುದರಿಂದ ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಬಹುದೆಂದರು.
ಅಂತರ್ ರಾಷ್ಟ್ರೀಯ ರಗ್ಬಿ ಪಟು ಮಾದಂಡ ಪಿ.ತಿಮ್ಮಯ್ಯ, ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಜೋಕೀಂ ರೊಡ್ರಿಗಸ್ಸ್, ಕಾಂಗ್ರೆಸ್ ಮುಖಂಡರಾದ ಎಜಾಜ್ ಅಹಮ್ಮದ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪ್ರಮುಖರಾದ ಮೊಹಮ್ಮದ್ ತಾರಿಕ್ (ತಾರು), ಪುರಸಭೆಯ ಸದಸ್ಯರಾದ ಅಬ್ದುಲ್ ಜಲೀಲ್, ಉದ್ಯಮಿಗಳಾದ ಬಿ.ಸಿ. ರಶೀದ್, ಆತೀಫ್ ಮನ್ನಾ, ನಗರ ಠಾಣಾಧೀಕಾರಿ ರವೀಂದ್ರ, ಸ್ನೇಹಿತರ ಬಳಗದ ಫರೂಖ್ ಅಬ್ದುಲ್ಲಾ, ನದಿಮ್ ಶರೀಫ್ ಮತ್ತು ಸ್ನೇಹಿತರ ಬಳಗದ ಪದಾಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ








