ಮಡಿಕೇರಿ ಡಿ.24 : ಕೊಡಗಿನ ಬೆಕ್ಕೆಸೊಡ್ಲೂರು ಶ್ರೀ ಶಾರದಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜು(55) ಅವರು ನಿಧನರಾಗಿದ್ದಾರೆ.
ಹೆಗ್ಗಡೆ ದೇವನಕೋಟೆಯಲ್ಲಿರುವ ತಮ್ಮ ಹೊಲದಲ್ಲಿ ಕೃಷಿ ಕಾರ್ಯ ನಿರತರಾಗಿದ್ದಾಗ ಎದೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಬಸವರಾಜು ಅವರು ಮೂಲತಃ ಹೆಚ್.ಡಿ ಕೋಟೆಯವರಾಗಿದ್ದು, ಬೆಕ್ಕೆಸೊಡ್ಲೂರು ಶಾರದಾ ಪ್ರೌಢ ಶಾಲೆಯಲ್ಲಿ ಕಳೆದ 26 ವರ್ಷಗಳಿಂದ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 2011ರಿಂದ ಇದೇ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಉತ್ತಮ ಶಿಕ್ಷಕ ಎಂದು ಹೆಸರು ಗಳಿಸಿದ್ದ ಬಸವರಾಜು ಅವರ ನಿಧನಕ್ಕೆ ಕೊಡಗು ಜಿಲ್ಲಾ ಖಾಸಗಿ ಅನುದಾನಿತ ಶಾಲಾ, ಕಾಲೇಜು ನೌಕರರ ಸಂಘದ ಅಧ್ಯಕ್ಷ ಪಡಿಞರಂಡ ಪ್ರಭು ಕುಮಾರ್, ಕಾರ್ಯದರ್ಶಿ ವೆಂಕಟೇಶ್ ಪೂಜಾರ್, ವಿರಾಜಪೇಟೆ ಶೈಕ್ಷಣಿಕ ತಾಲ್ಲೂಕು ಘಟಕದ ಅಧ್ಯಕ್ಷ ಗಿಡ್ಡಯ್ಯ ಹಾಗೂ ಕಾರ್ಯದರ್ಶಿ ತಮ್ಮಯ್ಯ ತೀವ್ರ ಸಂತಾಪ ಸೂಚಿಸಿದ್ದಾರೆ.









