ಮಡಿಕೇರಿ ಡಿ.24 : ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಾಲನೆ ಮಾಡುತ್ತಿದ್ದ ಸವಾರರಿಗೆ ಗೋಣಿಕೊಪ್ಪ ಪೊಲೀಸರು ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದರು.
ಗೋಣಿಕೊಪ್ಪ ಠಾಣಾಧಿಕಾರಿ ರೂಪಾ ದೇವಿ ಅವರು ಅತೀ ವೇಗದ ಚಾಲನೆ, ಸೀಟ್ ಬೆಲ್ಟ್, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದವರ ದಾಖಲಾತಿ ಪರಿಶೀಲನೆ ನಡೆಸಿ ಒಟ್ಟು 36 ಮಂದಿಗೆ ದಂಡ ವಿಧಿಸಿದರು.
ಪೊಲೀಸರು ತಪಾಸಣೆ ನಡೆಸುತ್ತಿರುವುದನ್ನು ಅರಿತ ಕೆಲವು ವಾಹನ ಸವಾರರು ಪೊಲೀಸರಿದ್ದ ರಸ್ತೆಯನ್ನು ಬದಲಿಸಿ ಪರ್ಯಾಯ ರಸ್ತೆಯಲ್ಲಿ ಸಂಚರಿಸಿ ದಂಡದಿಂದ ತಪ್ಪಿಸಿಕೊಂಡ ಪ್ರಸಂಗವೂ ನಡೆಯಿತು. ಚಾಲಕರಿಗೆ ಸುರಕ್ಷತೆಯ ಕುರಿತು ಪೊಲೀಸರು ಬುದ್ಧಿಮಾತು ಹೇಳಿದರು.
ಗೋಣಿಕೊಪ್ಪ ಪೊಲೀಸ್ ಸಿಬ್ಬಂದಿಗಳಾದ ಪ್ರಮೀಳಾ, ಬಿ.ಹೆಚ್.ವಿರೇಶ್, ಬೀರಲಿಂಗ ಹಾಜರಿದ್ದರು.











