ಬೇಕಾಗುವ ಪದಾರ್ಥಗಳು : ನೀರು-ಒಂದು ಬಟ್ಟಲು, ಕಾಳು ಮೆಣಸಿನ ಪುಡಿ-ಒಂದು ಚಿಟಿಕೆ, ಏಲಕ್ಕೆ ಪುಡಿ- ಒಂದು ಚಿಟಿಕೆ, ಪುದೀನಾ ಎಲೆ-15 ರಿಂದ 20, ತುಳಸಿ ಎಲೆ- 15 ರಿಂದ 20, ನಿಂಬೆರಸ- ಒಂದು ಚಮಚ, ಜೇನುತುಪ್ಪ ಅಥವಾ ಸಕ್ಕರೆ- ಒಂದು ಚಮಚ.
ಮಾಡುವ ವಿಧಾನ :: ಟೀ ತಯಾರಿಸುವ ಪಾತ್ರೆಯಲ್ಲಿ ಒಂದು ಕಪ್ ನೀರು ಹಾಕಿ. ಕುದಿ ಬಂದ ನಂತರ ಚಿಟಿಕೆ ಕಾಳು ಮೆಣಸಿನ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ.
ಬಳಿಕ ಪುದೀನಾ ಎಲೆ ಹಾಗೂ ತುಳಸಿ ಎಲೆಗಳನ್ನು ಹಾಕಿ. ಪ್ಲೇಟ್ ಮುಚ್ಚಿ. ಸಣ್ಣ ಉರಿಯಲ್ಲಿ ಎರಡು ನಿಮಿಷಗಳ ಕಾಲ ಕಾಯಿಸಿ. ನಂತರ ಒಲೆ ಮೇಲಿಂದ ಇಳಿಸಿ ನಿಂಬೆರಸ ಬೆರೆಸಿ. ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಜೇನುತುಪ್ಪ ಹಾಕಿ. ಬಳಿಕ ಕುದಿಸಿ, ಸೋಸಿ. ಇದೀಗ ಆರೋಗ್ಯಕರವಾದ ಹರ್ಬಲ್ ಗ್ರೀನ್ ಟೀ ಸವಿಯಲು ಸಿದ್ಧ.