ಮಡಿಕೇರಿ ಡಿ.30 : ಪ್ರಸಕ್ತ (2023) ಸಾಲಿನಲ್ಲಿ ವಿತರಿಸಲಾಗಿದ್ದ ವಿಕಲಚೇತನರ ರಿಯಾಯಿತಿ ದರದ ಬಸ್ಪಾಸ್ಗಳನ್ನು ಫೆ.28 ರವರೆಗೆ ಮಾನ್ಯ ಮಾಡಲಾಗಿದೆ.
ಪ್ರಸ್ತುತ ಸಾಲಿನಲ್ಲಿ ವಿಕಲಚೇತನರ ಪಾಸುದಾರರ ನವೀಕರಣ/ ಹೊಸ ಪಾಸು ಪಡೆಯುವ ಫಲನುಭವಿಗಳೆಲ್ಲರೂ ಅರ್ಜಿಯನ್ನು ಸೇವಾ ಸಿಂಧುಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಬೇಕಿದೆ. ಸೇವಾಸಿಂಧು ಪೋರ್ಟಲ್ https://sevasinduservices.karnataka.gov.in ನಲ್ಲಿ ಅರ್ಜಿಯನ್ನು ಸಲ್ಲಿಸುವಾಗ ವಿಕಲಚೇತನರು ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಪ್ರತಿ, ಪಾಸಪೋರ್ಟ್ ಸೈಜಿನ ಫೋಟೋ ಹಾಗೂ ಯು.ಡಿ.ಐ.ಡಿ/ ಗುರುತಿನ ಚೀಟಿಯನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡುವುದು.
ಆಯಾಯ ತಾಲ್ಲೂಕಿನ ಘಟಕದಲ್ಲಿ ಪಾಸುಗಳನ್ನು ಪಡೆಯುವುದು. ಹೊಸದಾಗಿ ಪಾಸ್ ಪಡೆಯುವವರು ವಿಭಾಗೀಯ ಕಚೇರಿ ಪುತ್ತೂರಿನಲ್ಲಿ ಪಡೆಯುವುದು. ಪಾಸು ಪಡೆಯುವ ಸಮಯದಲ್ಲಿ ಸಲ್ಲಿಸಿದ ಅರ್ಜಿಯ ಪ್ರತಿ ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಯು.ಡಿ.ಐ.ಡಿ ಚೀಟಿಯ ಜೆರಾಕ್ಸ್ ಪ್ರತಿ ಮತ್ತು ಮೂಲ ಪ್ರತಿ, ಪಾಸ್ ಪೋರ್ಟ್ ಸೈಜಿನ 2 ಫೊಟೋ, ಅಂಚೆ ಚೀಟಿ ಗಾತ್ರದ 1 ಫೊಟೋ ಹಾಗೂ ಯು.ಡಿ.ಐ.ಡಿ ಚೀಟಿಯ ಮಾನ್ಯತಾ ಅವಧಿಯನ್ನು ಪರಿಶೀಲನೆ ಮಾಡುವ ಸಲುವಾಗಿ ಪರಿಶೀಲನೆಗಾಗಿ ತೋರಿಸತಕ್ಕದ್ದು ಹಾಗೂ ರೂ.660 ಪಾವತಿ ಮಾಡಿ ಪಾಸನ್ನು ಪಡೆಯಬೇಕು. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ. 08272-295829 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
Breaking News
- *ಭಾಗಮಂಡಲ ಫ್ಲೈ ಓವರ್ – ಫ್ಲಾಶ್ ಬ್ಯಾಕ್*
- *ಅರ್ಚಕರ ಮೇಲೆ ನಡೆದ ಹಲ್ಲೆ ಪ್ರಕರಣ : ಸಹಕರಿಸಿದ ಆರೋಪಿಗಳು ಹಾಗೂ ವಾಹನಗಳು ವಶ : ಆರೋಪಿಗಳಿಗೆ ಸಹಾಯ ಮಾಡುತ್ತಿರುವವರ ಕುರಿತು ಮಾಹಿತಿ ಒದಗಿಸಲು ಎಸ್ಪಿ ಮನವಿ*
- *ಮುಖ್ಯಮಂತ್ರಿಗಳಿಗೆ ಕೊಡಗು ಎಸ್ಡಿಪಿಐಯಿಂದ ಪಂಚ ಪ್ರಶ್ನೆ*
- *ಜೀವ ಬೆದರಿಕೆ ಇದೆ ಎಂದು ಆರೋಪಿಸಿ ದೂರು ನೀಡಿದ ಎನ್.ಯು.ನಾಚಪ್ಪ*
- *ಮಡಿಕೇರಿಯಲ್ಲಿ ಹುತಾತ್ಮ ದಿನಾಚರಣೆ : ಗಾಂಧೀಜಿ ತತ್ವ, ಆದರ್ಶ ಮೈಗೂಡಿಸಿಕೊಳ್ಳಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ ಕರೆ*
- *ಕೊಡಗು : ಫೆ.13 ರವರೆಗೆ “ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ”*
- *ಒಳಮೀಸಲಾತಿ ಶೀಘ್ರ ಜಾರಿಗೆ ತರಲು ದಲಿತ ಸಂಘರ್ಷ ಸಮಿತಿ ಆಗ್ರಹ*
- *ಮೂರ್ನಾಡು ಗಜಾನನ ಯುವಕ ಸಂಘ ಖಂಡನೆ*
- *ಅಮಾಯಕರ ಮೇಲಿನ ಹಲ್ಲೆ ಖಂಡನೀಯ : ಮೂರ್ನಾಡು ಆಪ್ತಮಿತ್ರ ಬಳಗ ಅಸಮಾಧಾನ*
- *ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದಿಂದ ಸಂಭ್ರಮದ ಪುತ್ತರಿ ಒತ್ತೋರ್ಮೆ ಕೂಟ*