ಸಂಪಾಜೆ ಜ.2 : ಚೆಡಾವು-ಸಂಪಾಜೆ ಸ್ವಾಮಿ ಕೊರಗಜ್ಜ ದೈವದ ಸನ್ನಿಧಿಯ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಪೆರಾಜೆ ಶಾಸ್ತಾವು ದೇವಾಲಯದ ಮಾಜಿ ಧರ್ಮದರ್ಶಿ ಸುರೇಶ್ ಪೆರುಮುಂಡ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ದೈವಸ್ಥಾನದ ಧರ್ಮದರ್ಶಿ ಹೆಚ್.ಎಂ.ಬಾಬು, ನೇಮೋತ್ಸವ ಸಮಿತಿಯ ಅಧ್ಯಕ್ಷ ಹುದೇರಿ ಶಿವಯ್ಯ (ರವಿ), ಸಮಾಜ ಸೇವಕರಾದ ಕೆ.ಕೆ.ರಾಜೇಶ್ವರಿ, ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷ ಹೆಚ್.ಸಿ. ಗಣೇಶ್, ಸದಸ್ಯರಾದ ಶಶಿಕುಮಾರ್, ಸುಂದರ, ನಾರಾಯಣ, ಕೆ.ಟಿ.ಸತೀಶ್ , ಹುಕ್ರಪ್ಪ, ಮೋಹನ, ನಾಗೇಶ್, ಸಚಿನ್, ವಸಂತ, ಸಂತೋಷ್, ಶರತ್, ಅಶ್ವಥ್, ನಿತಿನ್, ಗೌರಿ, ಸುಮಿತ್ರಾ, ಸರೋಜ , ಹೆಚ್.ಎಂ. ನಾರಾಯಣ, ವಿತಿನ್ ಭಾಗವಹಿಸಿದ್ದರು.









