ವಿರಾಜಪೇಟೆ ಜ.2 : ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳ್ಳಿ ಮತ್ತು ಬೆಂಗಳೂರಿನ ಸಮಾಜಮುಖಿ ಪ್ರಕಾಶನ ವತಿಯಿಂದ ಕುಪ್ಪಳ್ಳಿಯಲ್ಲಿ ಆಯೋಜಿಸಲಾಗಿರುವ “ವಿಚಾರ ಕ್ರಾಂತಿಯ ಹಗಲಿರುಳು ಚಿಂತನ” ಶಿಬಿರಕ್ಕೆ ವಿರಾಜಪೇಟೆ ತಾಲೂಕಿನ ಪತ್ರಕರ್ತೆ ಹಾಗೂ ಸಾಹಿತಿ ರಜಿತ ಕಾರ್ಯಪ್ಪ ಆಯ್ಕೆಯಾಗಿದ್ದಾರೆ.
ಜ.6 ರಿಂದ ಮೂರು ದಿನಗಳ ಕಾಲ ಶಿಬಿರ ನಡೆಯಲಿದ್ದು, ರಾಜ್ಯದ ವಿವಿಧೆಡೆಗಳಿಂದ ಖ್ಯಾತ ಸಾಹಿತಿಗಳು, ಲೇಖಕರು ಶಿಬಿರದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.